ಬೆಂಗಳೂರು: ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಜನರು ಈಗಾಗಲೇ 2020ಕ್ಕೆ ಸ್ವಾಗತ ಕೋರಿದ್ದಾರೆ. ಈ ದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ.
ನ್ಯೂಜಿಲ್ಯಾಂಡ್‍ನ ಆಕ್ಲೆಂಡ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ಹ್ಯಾಮಿಲ್ಟನ್, ಟೌರಂಗಾ, ನೇಪಿಯರ್, ಡುನೆಡಿನ್ ಸೇರಿದಂತೆ ವಿವಿಧ ನಗರಗಳು ಸೇರಿದಂತೆ ಪ್ರವಾಸಿ ತಾಣದಲ್ಲಿ ಪಟಾಕಿ ಭಾರೀ ಸದ್ದು ಮಾಡುತ್ತಿವೆ. ಅಷ್ಟೇ ಅಲ್ಲದೆ ಬಣ್ಣ ಬಣ್ಣದ ದೀಪಗಳು ನಗರದಲ್ಲಿ ಬೆಳಕು ಹರಡಿದ್ದರೆ, ವಿವಿಧ ಸ್ಥಳಗಳಲ್ಲಿ ಜನರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್, ಬ್ರಿಸ್ಬೇನ್, ಪರ್ತ್, ಅಡಿಲೇಡ್, ನ್ಯೂಕ್ಯಾಸಲ್, ಕ್ಯಾನ್ಬೆರಾದಲ್ಲಿ ಹೊಸ ವರ್ಷವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿಡ್ನಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಆಕಾಶದಲ್ಲಿ ಪಟಾಕಿ ಸಿಡಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಿದ್ದಾರೆ.
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಬೆನ್ನಲ್ಲೇ ಜಪಾನ್, ದಕ್ಷಿಣ ಕೊರಿಯಾ, ಚೀನಾ, ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ 2020 ಅನ್ನು ಸ್ವಾಗತಿಸಲಿವೆ. ಬಳಿಕ ಬಾಂಗ್ಲಾದೇಶ, ನೇಪಾಳ, ಭಾರತ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾನ್ ಹೊಸ ವರ್ಷವನ್ನು ಬರಮಾಡಿಕೊಳ್ಳಲಿವೆ.
ಜರ್ಮನಿ, ಯುನೈಟೆಡ್ ಕಿಂಗ್‍ಡಮ್, ಕೆನಡಾ ಬಳಿಕ ಅಮೆರಿಕ ಹೊಸ ವರ್ಷಾಚರಣೆ ಮಾಡಲಿದೆ. ಭಾರತದಲ್ಲಿ ವರ್ಷ ಆಚರಣೆಗೆ ಭಾರೀ ಸಿದ್ಧತೆ ನಡೆದಿದೆ.


Leave a Reply