17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

ಬಾಲಿವುಡ್ ನಲ್ಲೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮತ್ತು ಕಿರುತೆರೆಯಲ್ಲೂ ಸಾಕಷ್ಟು ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹನ್ಸಲ್ ಮೆಹ್ತಾ, ಹದಿನೇಳು ವರ್ಷದಿಂದ ಪ್ರೀತಿಸುತ್ತಿದ್ದ ಸಫೀನಾ ಹುಸೇನ್ ಅವರನ್ನು ಮದುವೆಯಾಗಿದ್ದಾರೆ. ಸಫೀನಾ ಹುಸೇನ್ ಮತ್ತು ಹನ್ಸಲ್ ಮೆಹ್ತಾ ಹದಿನೇಳು ವರ್ಷಗಳಿಂದ ಡೇಟ್ ಮಾಡುತ್ತಿದ್ದರು ಎನ್ನುವುದು ವಿಶೇಷ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

ಅಜಯ್ ದೇವಗನ್ ನಟನೆ ಛಲಾಂಗ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳಿಗೆ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಸಾಹಿದ್ ಚಿತ್ರಕ್ಕಾಗಿ ಇವರು ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ. ಇಂತಹ ನಿರ್ದೇಶಕರು ಹದಿನೇಳು ವರ್ಷಗಳ ಪ್ರೀತಿಸಿ, ಎರಡು ಮಕ್ಕಳು ಆದ ನಂತರ ಮದುವೆಯಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ : ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

ಸಫೀನಾ ಹುಸೇನ್ ಮತ್ತು ಮೆಹ್ತಾ ಅವರು ಡೇಟ್ ನಲ್ಲಿದ್ದರೂ ಸತಿ ಪತಿಗಳಂತೆಯೇ ಬದುಕುತ್ತಿದ್ದರು. ಹಾಗಾಗಿ ಈ ಜೋಡಿ ಎರಡು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಕುರಿತು ಮಾತನಾಡಿರುವ ಮೆಹ್ತಾ, ‘ನಾವಿಬ್ಬರೂ ಮದುವೆ ಆಗದೇ ಇದ್ದರೂ, ಪ್ರತಿಜ್ಞೆ ತಗೆದುಕೊಂಡಂತೆ ಬದುಕು ನಡೆಸಿದೆವು. ಮಕ್ಕಳು ಬೆಳೆಯುವುದನ್ನು ನೋಡುತ್ತಾ 17 ವರ್ಷಗಳು ಹೇಗೆ ಕಳೆದವು ಎನ್ನುವುದೇ ಗೊತ್ತಾಗಲಿಲ್ಲ. ಇದೀಗ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

ಸಫೀನಾ ಮತ್ತು ಮೆಹ್ತಾ ಮದುವೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಫೀನಾ ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದರೆ, ಹನ್ಸಲ್ ಜೀನ್ಸ್ ಪ್ಯಾಂಟ್ ಮತ್ತು ಕೋಟ್ ನಲ್ಲಿ ಮಿಂಚುತ್ತಿದ್ದರು. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

ಹನ್ಸಲ್ ಮೆಹ್ತಾಗೆ ಇದು ಎರಡನೇ ಮದುವೆ. ಅವರು ತಮ್ಮ 20ನೇ ವಯಸ್ಸಿನಲ್ಲೇ ಸುನೀತಾ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ ಪಲ್ಲವ ಮತ್ತು ಜಯ್ ಎಂಬಿಬ್ಬರು ಮಕ್ಕಳೂ ಇದ್ದಾರೆ. ಆನಂತರ ಸುನೀತಾ ಜೊತೆ ಮೆಹ್ತಾ ವಿಚ್ಛೇದನ ಪಡೆದುಕೊಂಡರು. ಸುನೀತಾ ಅವರಿಂದ ದೂರವಾದ ನಂತರ ನಟ ಯುಸೂಫ್ ಹುಸೇನ್ ಅವರ ಪುತ್ರ ಸಫೀನಾ ಜೊತೆ ಡೇಟ್‍ ಮಾಡಲು ಆರಂಭಿಸಿದ್ದರು. ಇದೀಗ ಇಬ್ಬರೂ ಮದುವೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *