ಪವರ್ ಸ್ಟಾರ್ ರನ್ನು ನೋಡಿ ಓಡಾಡಲು ಪ್ರಯತ್ನಿಸುತ್ತಾರೆ ವಿಕಲಚೇತನ ಅಕ್ಕ- ತಮ್ಮ!

ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ನೋಡಿ ವಿಕಲಚೇತನರಾದ ಅಕ್ಕ-ತಮ್ಮ ಓಡಾಡಲು ಪ್ರಯತ್ನಿಸುತ್ತಿದ್ದು, ಒಮ್ಮೆಯಾದರು ಪುನಿತ್ ರಾಜಕುಮಾರ್ ಅವರನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ಶೃತಿ ಹಾಗೂ ತೇಜಸ್ ಒಂದು ಬಾರಿಯಾದರೂ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕೆಂಬ ಆಸೆಯಲ್ಲಿದ್ದಾರೆ.

ಹುಟ್ಟಿದಾಗ ಎಲ್ಲರಂತೆ ಚೆನ್ನಾಗಿದ್ದ ಶೃತಿ ಹಾಗೂ ತೇಜಸ್ ನಾಲ್ಕನೇ ತರಗತಿ ನಂತರ ಬೆಳೆಯುತ್ತಾ ಅಂಗವಿಕಲರಾಗಿದ್ದಾರೆ. ತಿಪಟೂರಿನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿರುವ ರಾಜಶೇಖರ್ ಹಾಗೂ ಜಯಮ್ಮ ದಂಪತಿಯ ಮಕ್ಕಳಿಗೆ ಪುನೀತ್ ಎಂದರೆ ಚಿಕ್ಕಂದಿನಿಂದಲೂ ಪಂಚಪ್ರಾಣ. ಈ ಇಬ್ಬರೂ ಮಕ್ಕಳಿಗೂ ಮಾತು ನಿಂತಿದ್ದು, ಓಡಾಡಲೂ ಆಗುತ್ತಿಲ್ಲ. ಹಾಸಿಗೆಯಲ್ಲೇ ಕಾಲಕಳೆಯುತ್ತಾರೆ.

ಈ ಇಬ್ಬರೂ ಮಕ್ಕಳು ಪುನೀತ್ ರಾಜಕುಮಾರ್ ಅವರ ಸಿನಿಮಾ, ಕಾರ್ಯಕ್ರಮ ವಾಹಿನಿಗಳಲ್ಲಿ ಪ್ರಸಾರವಾದರೇ ಕಣ್ಣ ರೆಪ್ಪೆ ಮುಚ್ಚದೆ ನೋಡುತ್ತಾರೆ. ಪುನೀತ್ ಸಿನಿಮಾ ನೋಡುತ್ತಿದ್ದಂತೆ ಈ ವಿಕಲಚೇತನರಲ್ಲಿ ಒಂದು ಚೈತನ್ಯ ಬಂದು ಕಾಲನ್ನು ಬಡಿಯುವ ಮೂಲಕ ಓಡಾಡಲು ಪ್ರಯತ್ನಿಸುತ್ತಾರೆ ಎಂದು ಪೋಷಕರು ಹೇಳಿದ್ದಾರೆ. ಈ ಕಾರಣಕ್ಕಾಗಿ ಒಮ್ಮೆಯಾದರೂ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದರೆ ತಮ್ಮ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಬಹುದು ಎಂದು ರಾಜಶೇಖರ್-ಜಯಮ್ಮ ದಂಪತಿ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *