ಹಾನಗಲ್ ಉಪಚುನಾವಣೆ, ಪಂಚಮಸಾಲಿ ಸಮುದಾಯದಕ್ಕೆ ಟಿಕೆಟ್ ಕೊಡಿಸುವಂತೆ ಶ್ರೀಗಳ ಮೂಲಕ ಒತ್ತಡ

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದೆ. ಈಗ ಅದರ ಜೊತೆಗೆ ಪಂಚಮಸಾಲಿ ಸಮಾಜದ ನಾಯಕರಿಗೆ ಟಿಕೆಟ್ ಕೊಡಿಸುವಂತೆ ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಪೀಠದಲ್ಲಿ ಸಮಾಜದ ಮುಖಂಡರು ಒತ್ತಡ ಹಾಕಿದ್ದಾರೆ.

ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರನ್ನು, ಹಾನಗಲ್ ತಾಲ್ಲೂಕಿನ ಪಂಚಮಸಾಲಿ ಸಮಾಜದ ಮುಖಂಡರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿಜೆಪಿಯಿಂದ ಪಂಚಮಸಾಲಿ ಸಮಾಜದ ಮಾಲತೇಶ ಸೊಪ್ಪಿನ, ಸಿ.ಆರ್. ಬಳ್ಳಾರಿ ಮತ್ತು ಕಾಂಗ್ರೆಸ್‍ನಿಂದ ಸೋಮಶೇಖರ ಕೋತಂಬ್ರಿಗೆ ಟಿಕೆಟ್ ಕೊಡಿಸುವಂತೆ ಸ್ವಾಮೀಜಿಗೆ ಒತ್ತಡ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಅಧ್ಯಕ್ಷರೇ ಇಲ್ಲ – ಹೈಕಮಾಂಡ್ ವಿರುದ್ಧವೇ ಸಿಡಿದ ಹಿರಿಯ ನಾಯಕರು

ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ಕೊಡಿಸುವಂತೆ ಸ್ವಾಮೀಜಿ ಜೊತೆ ಮುಖಂಡರು ಚರ್ಚೆ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾಜದವರಿಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸೋ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯಗೆ ಹಿರಿಯ ನಾಯಕರಿಂದ ಟಾಸ್ಕ್

ನಿನ್ನೆ ರಾತ್ರಿ ಸ್ವಾಮೀಜಿಯವರನ್ನ ಭೇಟಿ ಮಾಡಿದ ಮುಖಂಡರು ಕ್ಷೇತ್ರವೂ ಹೆಚ್ಚು ಪಂಚಮಸಾಲಿ ಮತದಾರರನ್ನ ಹೊಂದಿದೆ. ನಮ್ಮ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಅಭ್ಯರ್ಥಿಯ ಗೆಲವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಸ್ವಾಮೀಜಿಯವರ ಜೊತೆ ಅನೇಕ ಮುಖಂಡರು ಮಾತುಕತೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *