ಸಾವು ಗೆದ್ದು ಬಂದವಳ ‘ಸಾಹಸ’ ಕಥೆ : ಇದು ಕಥೆಯಲ್ಲ ಜೀವನ

ಹೈದರಾಬಾದ್: ಕನ್ನಡದ ‘ಮೋಹಿನಿ’ ಸಿನಿಮಾದ ಮೂಲಕ ಕನ್ನಡಿಗರ ಮನದಲ್ಲಿ ನೆಲೆಯೂರಿರುವ ಈ ನಟಿ ಸ್ತನ ಕ್ಯಾನ್ಸರ್ ಅನ್ನು ಗೆದ್ದ ಸ್ಟೋರಿ ರೋಚಕ ಮತ್ತು ಅಷ್ಟೇ ಭಾವುಕ. ಸಾವಿನ ದವಡೆಯಿಂದ ಸಾವರಿಸಿಕೊಂಡು ಬರುವುದಿದೆಯಲ್ಲ, ಅದು ಯಾವ ಶತ್ರುವಿಗೂ ಬೇಡ. ಅಂಥದ್ದೊಂದು ಮನಕಲಕುವ ಕಥನ ಇಲ್ಲಿದೆ.

ಕನ್ನಡದ ಮೋಹಿನಿ ಖ್ಯಾತಿಯ ಹಂಸ ನಂದಿನಿ ಕಳೆದ ವರ್ಷ ಸನ್ತ ಕ್ಯಾನ್ಸರ್ಗೆ ಒಳಗಾಗಿದ್ದರು. ಇದಕ್ಕೆ ಅಂಜದೆ ಈ ನಟಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಯಶಸ್ವಿಯಾಗಿದ್ದಾರೆ. ಈ ನಟಿ ತೆಲುಗಿನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಸಿನಿರಂಗದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದಾರೆ. ಇದನ್ನೂ ಓದಿ:  ಕಲಬುರಗಿ ಹೈದನಾದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್

ನಟಿಯ ಧೈರ್ಯದ ಕಥೆ ಏನು?
ಹಂಸ ನಂದಿನಿ ಅವರಿಗೆ ಕಳೆದ ವರ್ಷ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಇದರಿಂದ ಅವರು ಧೃತಿಗೆಡಲಿಲ್ಲ. ಬದಲಿಗೆ ಅದನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂದು ಸಿದ್ಧರಾಗಿದ್ದರು. ಹಂಸ ಅವರು ನಿರಂತರ ಕಿಮೋಥೆರಪಿಗೆ ಒಳಗಾಗಿದ್ದರು. ಈ ಕುರಿತು ಹಂಸ ಅವರು ಸೋಶಿಯಲ್ ಮೀಡಿಯಾದಲ್ಲಿ, ನಾನು 9 ಬಾರಿ ಕಿಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕಿಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಭರವಸೆ ಹೊಂದಿದ್ದೇನೆ. ಈ ರೋಗವು ನನ್ನ ಜೀವನ ಹಾಳು ಮಾಡಲು ನಾನು ಬಿಡುವುದಿಲ್ಲ. ಇದರ ವಿರುದ್ಧ ನಗುವಿನೊಂದಿಗೆ ಹೋರಾಡಿ, ಗೆಲ್ಲುತ್ತೇನೆ. ನಾನು ಬಲಶಾಲಿ ಆಗಿದ್ದೇನೆ. ಮತ್ತೆ ನಿಮ್ಮ ಮುಂದೆ ತೆರೆಯ ಮೇಲೆ ಬರುತ್ತೇನೆ’ ಎಂದು ಬರೆದು ತಮ್ಮ ಆತ್ಮಸ್ಥೈರ್ಯ ಪ್ರದರ್ಶನ ಮಾಡಿದ್ದರು.

ಮತ್ತೊಂದು ಪೋಸ್ಟ್ ಮಾಡಿದ ಅವರು, ನಾನೀಗ 16 ಕಿಮೋಥೆರಪಿಯನ್ನು ಪೂರೈಸಿದ್ದೇನೆ. ನಾನು ಈಗ ಅಧಿಕೃತವಾಗಿ ಕಿಮೋ ಸರ್ವೈವರ್ ಆಗಿದ್ದೇನೆ. ಆದರೆ ನಾನು ಇನ್ನೂ ಗೆದ್ದಿಲ್ಲ. ಇದು ಮುಂದಿನ ಯುದ್ಧಕ್ಕೆ ತಯಾರಾಗುವ ಸಮಯ, ಇದು ಶಸ್ತ್ರಚಿಕಿತ್ಸೆಗಳ ಸಮಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ನಾನು ಹೋರಾಟದಿಂದ ಎಂದೂ ಹಿಂದೆ ಸರಿಯುವುದಿಲ್ಲ. ಧೈರ್ಯ ಮತ್ತು ಪ್ರೀತಿಯಿಂದ ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗೆಡ್ಡೆಯೊಂದು ಇರುವುದು ಗೊತ್ತಾಯಿತು. ಇದು ತಿಳಿದ ಮೇಲೆ ನನ್ನ ಜೀವನ ಎಂದಿನಂತೆ ಇರಲಿಲ್ಲ. ವಿಷಯ ತಿಳಿದ ತಕ್ಷಣ ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್ನಲ್ಲಿರುವುದು ಗೊತ್ತಾಯಿತು. ಅಲ್ಲದೇ 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಆ ಕೆಟ್ಟ ನಟನಪಿನಲ್ಲೇ ನಾನು ವಾಸಿಸುತ್ತಿದ್ದೆ. ಆ ರೀತಿಯ ಕಾಯಿಲೆ ಮತ್ತೆ ನನಗೆ ಬಂತು ಎಂದು ತಿಳಿದ ಮೇಲೆ ಮೊದಲು ಭಯಗೊಂಡಿದ್ದೆ ಎಂದು ಹಂಸ ಆರಂಭದಲ್ಲಿ ನೋವಿನಿಂದ ಹೇಳಿಕೊಂಡಿದ್ದರು. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

ಈಗ ಆ ನೋವನ್ನು ಮರೆತು ಈ ನಟಿ ಖುಷಿಯಲ್ಲಿ ಎಲ್ಲ ರೀತಿಯ ತೊಂದರೆಗಳನ್ನು ಎದುರಿಸಿ ಜಯಶಾಲಿಯಾಗಿ ನಿಂತಿದ್ದಾರೆ. ಇವರಂತೆ ಎಲ್ಲರಿಗೂ ಆತ್ಮಸ್ಥೈರ್ಯ ಇದ್ರೆ ಎಂತಹ ಕಾಯಿಲೆಗಳನ್ನು ಬೇಕಾದರೂ ಎದುರಿಸಬಹುದು.

Comments

Leave a Reply

Your email address will not be published. Required fields are marked *