ಬಳ್ಳಾರಿ: ಕಾಂಗ್ರೆಸ್ ಸಂಸದ ಉಗ್ರಪ್ಪ ಭಾಷಣದ ವೇಳೆ ನೂರಾರು ಪೇಕ್ಷಕರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಘಟನೆ ಹಂಪಿ ಉತ್ಸವದಲ್ಲಿ ನಡೆಯಿತು.
ಹಂಪಿ ಉತ್ಸವ ಉದ್ಘಾಟನಾ ಸಮಾರಂಭದ ವೇಳೆ ಭಾಷಣ ಮಾಡಲು ಸಂಸದ ಉಗ್ರಪ್ಪ ಆಗಮಿಸಿದ್ದರು. ಸಂಸದರು ಭಾಷಣ ಆರಂಭಿಸುತ್ತಿದ್ದಂತೆ ಉತ್ಸವ ನೋಡಲು ಬಂದ ಪೇಕ್ಷಕರು ಮೋದಿ ಮೋದಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸಿದರು. ಹೀಗಾಗಿ ಹಂಪಿ ಉತ್ಸವದಲ್ಲಿಯೂ ಮೋದಿ ಮೋದಿ ಎನ್ನುವ ಜೈಕಾರ ಕೇಳಿದ್ದು ವಿಶೇಷವಾಗಿತ್ತು. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಚಾಲೆಂಜಿಂಗ್ ದರ್ಶನ್ ಆಗಮಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಮುನಿರತ್ನ ಅವರು ಭಾಗಿಯಾಗಿದ್ದರು. ಇದನ್ನು ಓದಿ: ಶ್ರೀಕೃಷ್ಣ ದೇವರಾಯನ ಅವತಾರ ಎತ್ತಲಿದ್ದಾರೆ ದರ್ಶನ್!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply