ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ

ಬರ್ಲಿನ್: ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಜರ್ಮನಿಯ (Germany) ಹ್ಯಾಮ್‍ಬರ್ಗ್‍ನ (Hamburg) ಯೆಹೋವ್‌ನ (Jehovah) ವಿಟ್‍ನೆಸ್ ಚರ್ಚ್‍ನಲ್ಲಿ (witness church) ನಡೆದಿದೆ.

ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಪರಾರಿಯಾಗಿರುವ ಅಥವಾ ಸಾವಿಗೀಡಾದ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ- CBIವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ

ರಾತ್ರಿ 9:15ರ ಸಮಯದಲ್ಲಿ ಪೊಲೀಸರಿಗೆ ತುರ್ತು ಕರೆಯೊಂದು ಬಂದಿದೆ. ಕರೆಯ ಆಧಾರದ ಮೇಲೆ ಚರ್ಚ್ ಬಳಿಗೆ ತೆರಳಿದ ಪೊಲೀಸರು ಗಾಯಗೊಂಡವರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹೆಲಿಕಾಪ್ಟರ್ (Helicopter) ಮೂಲಕ ಥರ್ಮಲ್ ಇಮ್ಯಾಜಿಂಗ್ ಕ್ಯಾಮೆರಾ (Thermal imaging camera) ಬಳಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸ್ಥಳೀಯ ನಿವಾಸಿಗಳಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಜನರು ವದಂತಿಗಳಿಗೆ ಕಿವಿಗೊಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಿಂತಿದ್ದ BMTC ಬಸ್ಸಿನಲ್ಲಿ ಬೆಂಕಿ- ಮಲಗಿದ್ದಲ್ಲೇ ಕಂಡಕ್ಟರ್ ಸಜೀವ ದಹನ

Comments

Leave a Reply

Your email address will not be published. Required fields are marked *