ಮಧ್ಯರಾತ್ರಿವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ಹಾಲಶ್ರೀ ವಿಚಾರಣೆ- ಇಂದು ಕೋರ್ಟ್ ಮುಂದೆ ಹಾಜರು

ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು (Abhinava Halashree) ಕೊನೆಗೂ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಟಕ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಅಭಿನವ ಹಾಲಶ್ರೀಗೆ 36 ವರ್ಷವಾಗಿರೋದ್ರಿಂದ ಬಿಪಿ, ಶುಗರ್, ಅಸ್ತಮಾ ಸಮಸ್ಯೆಯಿಲ್ಲ. ಎಲ್ಲವೂ ನಾರ್ಮಲ್ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಂತರ ಮಧ್ಯರಾತ್ರಿಯವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಹಾಲಶ್ರೀ ಸ್ಪಂದಿಸಿದ್ದು, ಚೈತ್ರಾ, ಗಗನ್ ಇಬ್ಬರ ಬಗ್ಗೆಯೂ ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ಹಾಲಶ್ರೀ ಸಿಸಿಬಿ ಅಧಿಕಾರಿಗಳ (CCB Officers) ಮುಂದೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

ಇಂದು ಬೆಂಗಳೂರಿನ ಎಸಿಎಂಎಂ ಕೋರ್ಟ್‍ಗೆ ಹಾಲಶ್ರೀಯನ್ನು ಸಿಸಿಬಿ ಹಾಜರುಪಡಿಸಲಿದ್ದು, ಕೋರ್ಟಿಗೆ ಹಾಜರುಪಡಿಸಿದ ನಂತರ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಹೀಗಾಗಿ ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಸ್ಟಡಿಗೆ ಪಡೆದ ಬಳಿಕ ಸಿಸಿಬಿ ಮಹಜರು ಪ್ರಕ್ರಿಯೆ ನಡೆಸಲಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]