ಬೆಂಗಳೂರು: ಬಿಜೆಪಿ ಸರ್ಕಾರ (BJP Government) ದ ವಿರುದ್ಧ ಕಾಂಗ್ರೆಸ್ (Congress) ಹೊಸ ಬಾಂಬ್ ಸಿಡಿಸಿದೆ. ಚುನಾವಣೆ (Election) ಹೊತ್ತಲ್ಲೇ ಮತದಾರರ ಮಾಹಿತಿ ಕಳ್ಳತನ ಆರೋಪ ಮಾಡಿದೆ.

ಎನ್‍ಜಿಓ (NGO) ಗಳಿಂದ ಜಾತಿ, ಮತ, ಧರ್ಮ, ಆಧಾರ್ ಕಾರ್ಡ್ (Adhar Card) ವಿವರ ಸಂಗ್ರಹ ಮಾಡಲಾಗುತ್ತಿದೆ. ಅಕ್ರಮ ಉದ್ದೇಶಕ್ಕಾಗಿ ಮತದಾರರ ವಿವರ ಸಂಗ್ರಹ ಮಾಡುತ್ತಿರುವುದಾಗಿ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ. ಅಲ್ಲದೆ ಸಿಎಂ ಬೊಮ್ಮಾಯಿ ಮತ್ತು ಸಚಿವ ಅಶ್ವಥ್ ನಾರಾಯಣ್ (Ashwath Narayan) ರಾಜೀನಾಮೆ ನೀಡುವಂತೆ ಆಗ್ರಹಿಸಿದೆ. ಇದನ್ನೂ ಓದಿ: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ- ರಾಮ್‍ದಾಸ್ ಪರೋಕ್ಷ ಆರೋಪ

ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ, ಹೊಂಬಾಳೆ ಪ್ರೈವೇಟ್ ಲಿ.ನಿಂದ ಮಾಹಿತಿ ಕಳ್ಳತನ ಮಾಡಲಾಗುತ್ತಿದೆ. ಮತದಾರರ ಮಾಹಿತಿ ಕದಿಯುವ ಕೆಲಸದಲ್ಲಿ ಸರ್ಕಾರ ತೊಡಗಿದೆ. ಮೊದಲು ಮಹದೇವಪುರದಲ್ಲಿ ಜಾಗೃತಿಗೆ ಅನುಮತಿ ಕೊಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಿಸುತ್ತಿರುವ ಕಂಪನಿ ಮಲ್ಲೇಶ್ವರಂನಲ್ಲಿದೆ. ಮತದಾರರ ಮಾಹಿತಿ ಎಲೆಕ್ಷನ್ ಕಮಿಷನ್‍ಗೆ ಅಪ್ಲೋಡ್ ಆಗಿಲ್ಲ. ವೈಯಕ್ತಿಕ ಮಾಹಿತಿ ಖಾಸಗಿ ಆ್ಯಪ್‍ಗೆ ಅಪ್ಲೋಡ್ ಆಗಿದ್ದೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಸ್ಥೆಗಳಿಗೂ ಸಿಎಂಗೂ, ಸಚಿವ ಅಶ್ವಥ್ ನಾರಾಯಣ್‍ಗೆ ಸಂಬಂಧವೇನು…?, ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು. ಬಿಬಿಎಂಪಿ ಕೂಡ ಈ ದತ್ತಾಂಶ ಕಳ್ಳತನದಲ್ಲಿ ಭಾಗಿಯಾಗಿದು, ಗುತ್ತಿಗೆ ನೌಕರರಿಗೆ ಸರ್ಕಾರಿ ಐಡಿ ಕೊಟ್ಟಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದಿದೆ. ಇದನ್ನೂ ಓದಿ: ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

Leave a Reply