ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

ನವದೆಹಲಿ : ವಿರೋಧ ಪಕ್ಷಗಳ ನಾಯಕರ ಐಫೋನ್‌ಗೆ ಹ್ಯಾಕಿಂಗ್ (iPhone Hack) ಸಂದೇಶ ಬಂದಿರುವ ತಾಂತ್ರಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕೆಲವು ಏಜೆನ್ಸಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.

ವಿಪಕ್ಷಗಳ ಆರೋಪದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಸಂಸದರು ಆಪಲ್‌ನಿಂದ ಎಚ್ಚರಿಕೆ ಸಂದೇಶ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆ್ಯಪಲ್‌ (Apple) ಭಾರತದಲ್ಲಿ ಮಾತ್ರ ಇಂತಹ ಸಂದೇಶ ಕಳುಹಿಸಿಲ್ಲ ಬದಲಿಗೆ ಸುಮಾರು 150 ದೇಶಗಳ ಜನರಿಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಿದೆ. ಈ ನಡುವೆ ಐಫೋನ್ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆ್ಯಪಲ್ ಸ್ಪಷ್ಟೀಕರಣವನ್ನು ನೀಡಿದೆ ಎಂದರು.  ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

 

ಸರ್ಕಾರದ ವಿರುದ್ಧ ಆರೋಪ ಮಾಡಿದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ವೈಷ್ಣವ್, ದೇಶದ ಪ್ರಗತಿಯನ್ನು ನೋಡಲು ಬಯಸದ ಜನರು ಇಂತಹ ರಾಜಕೀಯದಲ್ಲಿ ತೊಡಗಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವ ಕೆಲವರು ಅವರ ಕುಟುಂಬ ಅಧಿಕಾರದಲ್ಲಿದ್ದಾಗ ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಆದರೆ ನಮ್ಮ ಸರ್ಕಾರವು ಈ ವಿಷಯದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ತಿರುಗೇಟು ನೀಡಿದರು.  ಇದನ್ನೂ ಓದಿ: ಕೇಂದ್ರದಿಂದ ಸಂಸದರ ಐಫೋನ್‌ ಕದ್ದಾಲಿಕೆ – ಆಪಲ್‌ ಕಂಪನಿಯಿಂದ ಹೇಳಿಕೆ ಬಿಡುಗಡೆ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]