ಕಾಂಗ್ರೆಸ್‍ನ ಮತ ಬ್ಯಾಂಕ್, ಬಿಜೆಪಿ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಹಾಳು: ಹೆಚ್.ವಿಶ್ವನಾಥ್ ಕಿಡಿ

ಮೈಸೂರು: ಒಂದು ಕಡೆ ಕಾಂಗ್ರೆಸ್ ಮತ ಬ್ಯಾಂಕ್ ಲೆಕ್ಕ, ಇನ್ನೊಂದು ಕಡೆ ಬಿಜೆಪಿಯ ಕೆಲವರ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಕೆಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಒಬ್ಬ ವಿದ್ಯಾರ್ಥಿನಿ ಹೇಳುತ್ತಾಳೆ. ವಿದ್ಯಾರ್ಥಿನಿಯನ್ನು ಆ ರೀತಿ ಮಾತಾಡುವಂತೆ ಕಾಂಗ್ರೆಸ್ ಟ್ಯೂನ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‍ಗಾಗಿ ಮನಸ್ಸು ಕೆಡಿಸುತ್ತಿದೆ. ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಕಾಂಗ್ರೆಸ್ ಮಕ್ಕಳಿಗೆ ಹೇಳಿ ಕೊಡುತ್ತಿದೆ. ಇದು ದುರಂತವಾಗಿದೆ. ಒಟ್ಟಿನಲ್ಲಿ ಹಿಜಾಬ್ ವಿಚಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಇದು ತಿಳಿಯಾಗಬೇಕು. ಕೋರ್ಟ್ ಆದೇಶ ಪಾಲನೆ ಆಗಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ ಎಂದು ಹೇಳಿದರು. ಇದನ್ನೂ ಓದಿ: ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ

ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದ್ದು ತಪ್ಪು. ಸಿದ್ದರಾಮಯ್ಯನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸಬಾರದಿತ್ತು. ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿದ್ದು ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು. ಮುಖ್ಯಮಂತ್ರಿ, ಎರಡೂ ಸದನಗಳ ನಾಯಕರು, ಸ್ಪೀಕರ್‌ಗಳು ಮೊದಲು ಸಭೆ ಮಾಡಲಿ. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

Comments

Leave a Reply

Your email address will not be published. Required fields are marked *