ಸೂರಜ್‍ ರಾಜಕೀಯ ಪ್ರವೇಶಕ್ಕೆ ಇನ್ನೂ ಟೈಂ ಇದೆ: ಹೆಚ್‍.ಡಿ.ರೇವಣ್ಣ

HD Revanna

ಹಾಸನ: ನಾವು ರಾಜಕೀಯ ಮಾಡಿ ಸಾಕಾಗಿದೆ. ಸೂರಜ್ ರೇವಣ್ಣ ರಾಜಕೀಯ ಪ್ರವೇಶಿಸಲು ಇನ್ನೂ ಸಮಯವಿದೆ ಎಂದು ಶಾಸಕ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

Revanna

 

ಹಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ರಾಜಕೀಯ ಮಾಡಿ ಸಾಕಾಗಿದೆ. ಜೆಡಿಎಸ್‍ನಲ್ಲಿ ಒಳ್ಳೆ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ಆಸೆ ಎಂದರು. ಇದೇ ವೇಳೆ ಸೂರಜ್ ರೇವಣ್ಣ ರಾಜಕೀಯ ಎಂಟ್ರಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೂರಜ್‍ಗೆ ಇನ್ನೂ ಟೈ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷ ಬೇರೆಯಾದ್ರೂ ಗುಣಕ್ಕೆ ಮತ್ಸರವಿಲ್ಲ- ಮೋದಿಯನ್ನು ಹೊಗಳಿದ ಪ್ರಮೋದ್ ಮಧ್ವರಾಜ್

ಎಂಎಲ್‍ಸಿ ಚುನಾವಣೆಗೆ ಹಾಸನದಿಂದ ಸೂರಜ್ ರೇವಣ್ಣ ಅಥವಾ ಭವಾನಿ ರೇವಣ್ಣ ಸ್ಪರ್ಧೆ ಮಾಡುವ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ಇಂದು ದೇವೇಗೌಡರು, ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ಸಭೆ ಇದೆ. ಇದಾದ ಬಳಿಕ, ತಾಲೂಕುಗಳಲ್ಲಿ ಸಭೆ ನಡೆಸುತ್ತೇವೆ. ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಎಲ್ಲಾ ಶಾಸಕರು ಕುಳಿತು ಚರ್ಚಿಸಿ ನಂತರ ತೀರ್ಮಾನ ಮಾಡುತ್ತೇವೆ. ಸೂರಜ್ ರೇವಣ್ಣ, ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ಸುಮ್ಮನೆ ಮಾತನಾಡಬಾರದು ಎಂದು ಹೇಳಿದರು.

ಹಾಸನದ ಎಂಪಿ ನಿವಾಸದಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆ ಕರೆಯಲಾಗಿತ್ತು. ಹಾಸನದಲ್ಲಿ ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇದ್ದು, ಚಳಿಯ ವಾತಾವರಣ ಇದೆ. ಹೀಗಾಗಿ ಚಳಿಯಿಂದ ರಕ್ಷಣೆ ಪಡೆಯಲು ಟೋಪಿ ಧರಿಸಿ ಬಂದ ರೇವಣ್ಣ, ವಿಪರೀತ ಚಳಿ ಇದೆ. ಹೀಗಾಗಿ ಟೋಪಿ ಧರಿಸಿ ಬಂದಿದ್ದೇನೆ ಎಂದರು. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

HD Revanna, Suraj Revanna, Politics, JDS, Hassana, Public TV

Comments

Leave a Reply

Your email address will not be published. Required fields are marked *