ಇದು ರೈತರ ಹೋರಾಟವಲ್ಲ, ಮೈತ್ರಿ ಸರ್ಕಾರವನ್ನು ಇಳಿಸಲು ರೂಪಿಸಿದ ಸಂಚು: ರೇವಣ್ಣ

ಬೆಂಗಳೂರು: ಸಿಎಂ ಬಳಿ ನೋಟ್ ಮುದ್ರಣ ಮಾಡೋ ಯಂತ್ರ ಇದೆಯೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಇಂದು ರೈತರ ಹೋರಾಟವನ್ನು ಮೈತ್ರಿ ಸರ್ಕಾರ ಇಳಿಸಲು ನಡೆಸುತ್ತಿರುವ ಸಂಚು ಎಂದು ಆರೋಪಿಸಿದ್ದಾರೆ.

ಕಬ್ಬು ಬೆಳೆಗಾರರ ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್.ಡಿ ರೇವಣ್ಣ, ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಇಳಿಸಲೇಬೇಕೆಂದು ಕೆಲ ನಾಯಕರು ಸಂಚು ಮಾಡುತ್ತಿದ್ದಾರೆ. ಯಾವುದಕ್ಕೂ ನಾವು ಹೆದರಲ್ಲ. ಈ ಪ್ರತಿಭಟನೆ ಹಿಂದೆ ಯಾರಿದ್ದಾರೆ ಎನ್ನುವುದು ನಮ್ಮ ಸರ್ಕಾರಕ್ಕೆ ಗೊತ್ತಿದೆ ಎಂದು ಹೇಳಿದರು.

ಕಬ್ಬಿನ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಯಿಂದ ವಸೂಲಿ ಮಾಡಿಸಿ ಕೊಡುವ ಕೆಲಸ ಸಿಎಂ ನೋಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರವು ಕಬ್ಬು ಬೆಳಗಾರರಿಗೆ ನೆರವನ್ನು ನೀಡಬೇಕು. ಆದರೆ ಎಲ್ಲದಕ್ಕೂ ರಾಜ್ಯ ಸರ್ಕಾರವನ್ನೇ ಹೊಣೆ ಮಾಡುವುದು ಸರಿಯಲ್ಲ. ರಾಜ್ಯದ ಬರ ಪೀಡಿತ ಪ್ರದೇಶಗಳ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿಲ್ಲ. ರಾಜ್ಯದಲ್ಲಿರುವ 17 ಜನ ಸಂಸದರಿಗೆ ನಾಚಿಕೆಯಾಬೇಕು. ಯಾವುದಕ್ಕೆ ರಾಜಕಾರಣ ಮಾಡಬೇಕೋ ಅದರಲ್ಲಿ ರಾಜಕಾರಣ ಮಾಡಲಿ. ಈ ರೀತಿ ಸರ್ಕಾರ ವಿರುದ್ಧ ಜನರನ್ನು ಎತ್ತಿ ಕಟ್ಟುವ ಕೆಳ ಮಟ್ಟದ ರಾಜಕಾರಣ ಮಾಡಬಾರದು ಬಿಜೆಪಿ ವಿರುದ್ಧ ಕಿಡಿಕಾರಿದರು.

ರೈತರ ಬಗ್ಗೆ ನಮಗೆ ಕಾಳಜಿ ಇದೆ ಅವರನ್ನು ನಾವು ಎಂದಿಗೂ ಕಡೆಗಣಿಸಲ್ಲ. ಅಷ್ಟೇ ಅಲ್ಲದೆ ಸಿಎಂ ರೈತರಿಗಾಗಿ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕಬ್ಬು ಬೆಳೆಗಾರರಿಗೆ ಸಿಎಂ ನ್ಯಾಯ ದೊರಕಿಸಿಕೊಡ್ತಾರೆ. ಆದರೆ ಕಬ್ಬು ಬೆಳೆಗಾರರು ಹೋರಾಟದ ನಡುವೆ ಸುವರ್ಣಸೌಧದ ಬಳಿ ಇದ್ದ ಗೇಟ್‍ಗೆ ಹಾನಿ ಮಾಡಿದ್ದಾರೆ. ಈ ತರಹದ ಕೆಲಸ ಮಾಡುವುದು ನಿಜವಾದ ರೈತರಿಗೆ ಅಗೌರವ ನೀಡಿದಂತೆ ಆಗುತ್ತದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *