ವಿಶ್ವವೇ ಒಪ್ಪಿದ ಮೋದಿ ವಿರುದ್ಧ ಮಾತಾಡೋಕೆ ಸಿದ್ದರಾಮಯ್ಯ ಯಾರು?: ದೇವೇಗೌಡ್ರು

ಬೆಂಗಳೂರು: ಬರ ಪರಿಹಾರ ಕೊಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿರುದ್ಧ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು (H. D. Deve Gowda) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ. ನಾನು ಸಿಎಂ ಆಗಿದ್ದಾಗ ರಾಜ್ಯದ ರೈತರ ಸಾಲಮನ್ನಾ ಮಾಡ್ತೀನಿ ಎಂದು ಅಂದಿನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಲಿಲ್ಲ. ಆಗ ಸಿದ್ದರಾಮಯ್ಯ ಹಣಕಾಸು ಮಂತ್ರಿ ಆಗಿದ್ದರು. ನಿಮಗೆ ಪ್ರಾಮಾಣಿಕತೆ ಇದ್ದರೆ ಅವತ್ತು ಏನು ನಡೀತು ಎಂದು ಹೇಳಿ. ಈಗ ಯಾಕೆ ಮೋದಿ ಬಗ್ಗೆ ಮಾತಾಡ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ವಿಲೀನ ಇಲ್ಲ: ಸಿದ್ದರಾಮಯ್ಯಗೆ ದೇವೇಗೌಡ ತಿರುಗೇಟು

ಬೆಳಗ್ಗೆ ಎದ್ದರೆ ಮೋದಿ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಯಾಕೆ ಕೊಡಬೇಕು? ಮನಮೋಹನ್ ಸಿಂಗ್ ಏನು ಕೊಟ್ಟಿದ್ದಾರೆ? ವಾಜಪೇಯಿ ಏನು ಕೊಟ್ಡಿದ್ದಾರೆ ಎಂದು ಹೇಳಿ. ಸಿದ್ದರಾಮಯ್ಯನವರೇ ಸತ್ಯ ಹೇಳಿ. ಬೆಳಗ್ಗೆಯಿಂದ ಸಂಜೆಯವರೆಗೂ ಮೋದಿ ಮೋದಿ ಎನ್ನುತ್ತೀರಿ, ಮೋದಿ ಈ ದೇಶದ ಸಮರ್ಥ ನಾಯಕ ಎಂಬುದನ್ನು ಇಲ್ಲ ಎನ್ನಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ.

Who is he? ಮೋದಿಯನ್ನ ಇಡೀ ವಿಶ್ವ ಒಪ್ಪಿದೆ. ಮಾತಾಡೋಕು ಇತಿಮಿತಿ ಇರಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಅವರು ಗುಡುಗಿದ್ದಾರೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ