16ರ ಹುಡ್ಗನನ್ನ ಕಿಡ್ನ್ಯಾಪ್ ಮಾಡಿ ಸುಟ್ಟುಹಾಕಿದ ಜಿಮ್ ಟ್ರೇನರ್

ಮುಂಬೈ: ಗೆಳೆಯನೊಬ್ಬ ಹಣಕ್ಕಾಗಿ 16 ವರ್ಷದ ಹುಡುಗನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ನಿಖಿಲ್ ಅನಂತ್ ಅಂಗ್ರೊಲ್ಕರ್(16) ಮೃತ ಹುಡುಗ. ಈತ ವಿಠಾಲ್ ನಗರದ ವಾರ್ಜೆ ನಿವಾಸಿಯಾಗಿದ್ದು, 10ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದನು. ಈಗಾಗಲೇ ಆರೋಪಿಯನ್ನು 25 ವರ್ಷದ ವಿನಯ್‍ಸಿಂಗ್ ವೀರೇಂದ್ರಾಸಿಂಗ್ ರಜಪೂತ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಪ್ರಕರಣ?
ನಿಖಿಲ್ ಮತ್ತು ಆರೋಪಿ ರಜಪೂತ್ ಇಬ್ಬರು ಕುಟುಂಬದವರು ನೆರೆಹೊರೆಯವರಾಗಿದ್ದರು. ಆರೋಪಿ ರಜಪೂತ್ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಜಿಮ್‍ನಲ್ಲಿ ಕೆಲಸ ಮಾಡುತ್ತಿದ್ದನು. ನಿಖಿಲ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಎರಡು ಕುಟುಂಬಗಳ ಮಧ್ಯೆ ಒಳ್ಳೆಯ ಸಂಬಂಧ ಇತ್ತು. ಅಷ್ಟೇ ಅಲ್ಲದೇ ಆರೋಪಿ ರಜಪೂತ್ ಪ್ರತಿದಿನ ನಿಖಿಲ್ ಮನೆಗೆ ಹೋಗಿ ಬರುತ್ತಿದ್ದನು.

ಭಾನುವಾರ ನಿಖಿಲ್ ಮನೆಯಿಂದ ಹೊರಗಡೆ ಹೋಗಿದ್ದಾನೆ. ಆದರೆ ಸಂಜೆಯಾದರೂ ಹಿಂದಿರುಗಿ ಮನೆಗೆ ವಾಪಸ್ ಬಂದಿರಲಿಲ್ಲ. ಪೋಷಕರು ಎಲ್ಲ ಕಡೆ ಹುಡುಕಾಡಿ ಕೊನೆಗೆ ವಾರ್ಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದರು. ಇತ್ತ ಆರೋಪಿ ರಜಪೂತ್ ಕುಟುಂಬದವರು ಕೂಡ ನಿಖಿಲ್ ಹುಡುಕಲು ಸಹಾಯ ಮಾಡಿದ್ದರು.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಗ ಬುಧವಾರ ಹ್ಮದಾ ಕಾಲೋನಿಯ ಹಿಂಭಾಗದ ತೋಟದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿದ್ದ ಸ್ಥಿತಿಯಲ್ಲಿ ನಿಖಿಲ್ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಆರೋಪಿ ರಜಪೂತನನ್ನು ಶಂಕೆಯ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ತಾನೆ ಕಿಡ್ನಾಪ್ ಮಾಡಿದ್ದು, ಯಾರಿಗಾದರೂ ನನ್ನ ಬಗ್ಗೆ ಹೇಳುತ್ತಾನೆ ಎಂಬ ಭಯದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ನಿಖಿಲ್‍ನನ್ನು ಆತನ ತಂದೆ ಶಾಪ್ ನಿಂದ ಭಾನುವಾರ ಸಂಜೆ ಕಿಡ್ನ್ಯಾಪ್ ಮಾಡಲಾಗಿತ್ತು. ಆದರೆ ರಜಪೂತ ಆತನ ಬಾಯಿಗೆ ಬಟ್ಟೆ ಕಟ್ಟಿ, ಇಟ್ಟಿಗೆಯಿಂದ ಹುಡುಗನ ತಲೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಸುಟ್ಟುಹಾಕಿದ್ದಾನೆ. ನಿಖಿಲ್ ಕಿಡ್ನ್ಯಾಪ್ ಮತ್ತು ಕೊಲೆ ಮಾಡಲು ತನ್ನ ಸ್ನೇಹಿತನಾದ ಋಶಿಕೇಶ್ ಸಹಾಯವನ್ನು ತೆಗೆದುಕೊಂಡಿದ್ದಾನೆ. ರಜಪೂತ 25 ಸಾವಿರ ಸಾಲ ತೀರಿಸಲು ಈ ರೀತಿ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂದು ಹಿರಿಯ ಇನ್ಸ್ ಪೆಕ್ಟರ್ ರೇಖಾ ಸಲೂಂಕೆ ಹೇಳಿದ್ದಾರೆ.

ಗುರುವಾರ ಮುಂಜಾನೆ ಮರಣೋತ್ತರ ಪರೀಕ್ಷೆಯ ಬಳಿಕ ನಿಖಿಲ್ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಸದ್ಯಕ್ಕೆ ಈ ಕುರಿತು ವಾರ್ಜೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯಾದ ಋಶಿಕೇಶ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *