ಇಸ್ತ್ರಿ ಪೆಟ್ಟಿಗೆ ಮತ್ತು ಹೇರ್ ಡ್ರೈಯರ್ ಕಳುಹಿಸಲು ಯಾರನ್ನು ಸಂಪರ್ಕಿಸಬೇಕು: ಬಿಸಿಸಿಐಗೆ ಜನರ ಪ್ರಶ್ನೆ

ಗುವಾಹಟಿ: ಭಾನುವಾರ ಬಾರಾಬತಿ ಕ್ರೀಡಾಂಗಣದಲ್ಲಿ ಪಿಚ್ ಒಣಗಿಸಲು ಸಿಬ್ಬಂದಿ ಹೇರ್ ಡ್ರೈಯರ್ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಮೊದಲನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಂದ್ಯ ಆರಂಭವಾಗುತ್ತದೆ ಎನ್ನುವಾಗ ಮಳೆ ಸುರಿಯತೊಡಗಿತು.

ಮಳೆ ನಿಂತ ನಂತರ ರಾತ್ರಿ 9 ಗಂಟೆಯ ಪಂದ್ಯ ಆರಂಭವಾಗಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಪಿಚ್ ಒದ್ದೆಯಾಗಿದ್ದ ಕಾರಣ ಅಂಪೈರ್ ಪಂದ್ಯವನ್ನು ರದ್ದುಗೊಳಿಸಿದರು. ಮಳೆಯಿಂದ ಒದ್ದೆಯಾದ ಪಿಚ್ ಒಣಗಿಸಲು ಸಿಬ್ಬಂದಿ ವಾಕ್ಯೂಮ್ ಕ್ಲೀನರ್ ಮತ್ತು ಹೇರ್ ಡ್ರೈಯರ್ ಬಳಸಿದ್ದು ಈಗ ಕಟು ಟೀಕೆಗೆ ಗುರಿಯಾಗಿದೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಹೇರ್ ಡ್ರೈಯರ್ ಬಳಸಿದ್ದನ್ನು ಜನ ಟ್ರೋಲ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ಸಹಾಯ ಪಡೆದು ಪಿಚ್ ಒಣಗಿಸಬಹುದಿತ್ತು. ಈ ರೀತಿ ರದ್ದು ಮಾಡುವುದು ಎಷ್ಟು ಸರಿ? ವಾಟ್ ಎ ಶೇಮ್ ಎಂದು ಬರೆದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ನಾನು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಕಳುಹಿಸಬೇಕು ಎಂದು ಯೋಚಿಸಿದ್ದೇನೆ. ಇವುಗಳನ್ನು ಕಳುಹಿಸಲು ಯಾರನ್ನು ಸಂಪರ್ಕಿಸಬೇಕೆಂದು ಅಸ್ಸಾಂ ಸರ್ಕಾರ ಮತ್ತು ಬಿಸಿಸಿಐಯನ್ನು ಪ್ರಶ್ನಿಸಿ ಜನ ಟ್ರೋಲ್ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಗೊಳ್ಳುತ್ತದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Comments

Leave a Reply

Your email address will not be published. Required fields are marked *