ಬಾಬಾ ರೂಮ್‍ನಲ್ಲಿ ವಯಾಗ್ರಾ ಇದ್ದಿದ್ದು ನೋಡಿದ್ದೆ- ರಾಖಿ ಸಾವಂತ್

ಮುಂಬೈ: ಅತ್ಯಾಚಾರ ಆರೋಪ ಸಾಬೀತಾದ ನಂತರ ಜೈಲು ಸೇರಿರೋ ಗುರುಮೀತ್ ರಾಮ್ ರಹೀಮ್ ಬಾಬಾನ ರೂಮಿನಲ್ಲಿ ನಾನು ವಯಾಗ್ರಾ ಇದ್ದಿದ್ದು ನೋಡಿದ್ದೆ ಎಂದು ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಹೇಳಿದ್ದಾರೆ.

ರಾಮ್ ರಹೀಮ್ ಬಾಬಾ ಬಗ್ಗೆ ಸಿನಿಮಾ ಮಾಡಲು ಹೊರಟಿರೋ ರಾಖಿ ಸಾವಂತ್, ಬಾಬಾ ಬಗ್ಗೆ ಸಾಕಷ್ಟು ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಒಮ್ಮೆ ಬಾಬಾ ಭೇಟಿಯಗಲು ಸೆಕ್ರೆಟರಿ ಅರೋರಾಯಿಂದ ನನಗೆ ಮ್ಯಾರಿಯಾಟ್ ಹೋಟೆಲ್‍ಗೆ ಆಹ್ವಾನಿಸಲಾಗಿತ್ತು. ಬಾಬಾ ರೂಮಿನಲ್ಲಿ ಏನಿತ್ತು ಗೊತ್ತಾ? ವಯಾಗ್ರಾ! ದೇವಮಾನವನ ರೂಮಿನಲ್ಲಿ ವಯಾಗ್ರಾ ಯಾಕಿತ್ತು? ನನಗಂತೂ ಒಂದು ಕ್ಷಣ ಶಾಕ್ ಆಯಿತು. ಒಂದಲ್ಲಾ ಒಂದು ದಿನ ನಾನು ಇದನ್ನ ಬಹಿರಂಗಪಡಿಸುತ್ತೇನೆ ಅಂದುಕೊಂಡಿದ್ದೆ. ಅದನ್ನೀಗ ಮಾಡ್ತಿದ್ದಿನಿ ಅಂತ ರಾಖಿ ಸಾವಂತ್ ಹೇಳಿದ್ದಾರೆ.

ರಾಮ್ ರಹೀಮ್‍ನನ್ನು ತಪಾಸಣೆ ಮಾಡಿದ ಜೈಲಿನ ವೈದ್ಯರು, ಆತನೊಬ್ಬ ಸೆಕ್ಸ್ ವ್ಯಸನಿ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಸಹಚರರನ್ನು ಸಲಿಂಗಿಗಳಾಗಲು ಒತ್ತಾಯಿಸುತ್ತಿದ್ದ ಎಂದು ಮಾಜಿ ಡೇರಾ ಅನುಯಾಯಿ ಗುರ್ದಾಸ್ ಸಿಂಗ್ ಹೇಳಿದ್ದಾರೆ. ಯುವತಿಯರು ತುಂಡುಡುಗೆ ತೊಟ್ಟು ರಾಮ್ ರಹೀಮ್ ಸುತ್ತಮುತ್ತ ಓಡಾಡುತ್ತಿದ್ದುದು ನೋಡಿ ನನಗೆ ಆಶ್ಚರ್ಯವಾಗಿತ್ತು ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇನ್ನು ರಾಮ್ ರಹೀಮ್ ತನ್ನ ದತ್ತು ಪುತ್ರಿ ಎಂದು ಹೇಳಿಕೊಂಡಿದ್ದ ಹನಿಪ್ರೀತ್ ಬಗ್ಗೆ ಮಾತನಾಡಿದ ರಾಖಿ, ಗುರುಮೀತ್ ಮತ್ತು ಹನಿಪ್ರೀತ್ ನನಗೆ ಕಳೆದ ಮೂರುವರೆ ವರ್ಷದಿಂದ ಗೊತ್ತು. ಈ ಅವಧಿಯಲ್ಲಿ ಅವರನ್ನ ಹಲವಾರು ಬಾರಿ ಭೇಟಿಯಾಗಿದ್ದೇನೆ. ಒಂದು ಬಾರಿ ನಾನು ಡೇರಾದಲ್ಲಿ ಗುಫಾ(ಗುಹೆ)ಯೊಳಗೆ ಹೋಗಿದ್ದೆ, ಗುರುಮೀತ್ ಹುಟ್ಟುಹಬ್ಬದ ದಿನ ನನ್ನನ್ನು ಅಹ್ವಾನಿಸಿದ್ದರು. ಗುರುಮೀತ್ ಜೊತೆ ನನ್ನ ಸಾಮಿಪ್ಯವನ್ನ ಕಂಡು ಹನಿಪ್ರೀತ್‍ಗೆ ಇಷ್ಟವಾಗಿರಲಿಲ್ಲ. ನಾನು ಗುರುಮೀತ್‍ನನ್ನು ಮದುವೆಯಾಗಿ ಆಕೆಯ ಸವತಿಯಾಗಿಬಿಡ್ತೀನಿ ಎಂಬ ಭಯ ಆಕೆಗಿತ್ತು. ಗುರುಮೀತ್ ತನ್ನ ಮಹಿಳಾ ಅನುಯಾಯಿಗಳನ್ನ ಶೋಷಣೆ ಮಾಡುತ್ತಿದ್ದುದು ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುಮೀತ್ ಬಾಬಾಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ಹನಿಪ್ರೀತ್ ತಲೆಮರೆಸಿಕೊಂಡಿದ್ದು, ಹರಿಯಾಣ ಪೊಲೀಸರ 48 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಹನಿಪ್ರೀತ್ ಮೊದಲಿಗಳಾಗಿದ್ದಾಳೆ.

ಇದನ್ನೂ ಓದಿ:  ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ

Comments

Leave a Reply

Your email address will not be published. Required fields are marked *