ಚಾಮರಾಜನಗರ: ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ ಸಿಕ್ಕಿದೆ.
ಹೌದು. ಗುಂಡ್ಲುಪೇಟೆಯ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ರೋಡ್ ಶೋ ಆಯೋಜಿಸಿತ್ತು. ಈ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಾರ್ಯಕರ್ತರಿಗೆ 1 ಲೀಟರ್ ಉಚಿತ ಪೆಟ್ರೋಲ್ ಸಿಕ್ಕಿದೆ.
ಉಚಿತ ಪೆಟ್ರೋಲ್ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಟೋಕನ್ ಹಂಚಿತ್ತು. ಈ ಕಾರ್ಯಕರ್ತರು ಬಂಕ್‍ನಲ್ಲಿ ಟೋಕನ್ ತೋರಿಸಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಹಾಕಿದ ಬಳಿಕ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದರು.
ರೋಡ್ ಶೋದಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರಾದ ಯುಟಿ ಖಾದರ್, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ಸಿಎಂ ಇಬ್ರಾಹಿಂ, ಸಂಸದ ಧ್ರುವನಾರಾಯಣ, ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಪಾಲ್ಗೊಂಡಿದ್ದರು.
ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ಏಪ್ರಿಲ್ 9ಕ್ಕೆ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಕ್ಷೇತ್ರ ತೆರವಾಗಿದ್ದರೆ, ಮಹದೇವ್ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ ಕ್ಷೇತ್ರ ತೆರವಾಗಿದೆ.
https://www.youtube.com/watch?v=NdGSmJ5EBIY












Leave a Reply