ಯುಎಇಯಿಂದ ಜಮ್ಮು- ಕಾಶ್ಮೀರದಲ್ಲಿ 70 ಸಾವಿರ ಕೋಟಿ ಹೂಡಿಕೆ; 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ನವದೆಹಲಿ/ಶ್ರೀನಗರ: ಇದೇ ಮೊದಲಬಾರಿಗೆ ಭಾರತ ಹಾಗೂ ಅರಬ್ ಸಂಯುಕ್ತ ಸಂಸ್ಥಾನ (ಯುಎಇ)ದ ಭಾರತದಲ್ಲಿ ವ್ಯಾಪಾರಕ್ಕಾಗಿ ಹೂಡಿಕೆ ಮಾಡಲು ನಿರ್ಧರಿಸಿದ್ದು, 36 ಸದಸ್ಯರ ನಿಯೋಗವು ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ ನಡೆಸಲು ಅನ್ವೇಷಣೆ ನಡೆಸಿದೆ. ಅಲ್ಲದೆ, ಸುಮಾರು 70 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ.

ವಿದೇಶಿ ಹೂಡಿಕೆದಾರರಿಂದ ಮುಂದಿನ 6 ತಿಂಗಳಲ್ಲಿ ಸುಮಾರು 70 ಸಾವಿರ ಕೋಟಿ ಹೂಡಿಕೆ ಬರುವ ನಿರೀಕ್ಷೆಯಿದ್ದು, ಈಗಲೇ 27 ಸಾವಿರ ಕೋಟಿ ಹೂಡಿಕೆಗೆ ಸರ್ಕಾರ ಅನುಮತಿ ನೀಡಿದೆ. ಇನ್ನು 6 ತಿಂಗಳೊಳಗೆ 70 ಕೋಟಿ ದಾಟಲಿದೆ ಎಂದು ಜಮ್ಮು-ಕಾಶ್ಮೀರದ ಸರ್ಕಾರ ತಿಳಿಸಿದೆ.

4 ದಿನ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಸೌದಿ ಅರೇಬಿಯಾ, ಹಾಂಕಾಂಗ್ ಸೇರಿದಂತೆ ಮಧ್ಯಪ್ರಾಚ್ಯದ ಪ್ರತಿನಿಧಿಗಳು ಜಮ್ಮು ಕಾಶ್ಮೀರದಲ್ಲಿ ಹೆಚ್ಚಾಗಿ ಆರೋಗ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಕಾಶ್ಮೀರವು ಸುರಕ್ಷಿತ ಸ್ಥಳವಾಗಿರುವುದರಿಂದ ಇಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಈ ಹೂಡಿಕೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ಸಿಗಲಿದೆ. ಜೊತೆಗೆ ಮುಂಬರುವ ವಿದೇಶಿ ಉದ್ಯಮಿಗಳಿಗೆ ಮಾರುಕಟ್ಟೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಅಲ್ಲದೆ, ಈ ಹೂಡಿಕೆಯಿಂದಾಗಿ ಯುಎಇ ಮತ್ತು ಭಾರತದ ನಡುವಿನ ಸಂಬಂಧವು ಬಲಗೊಳ್ಳುತ್ತದೆ ಎಂದು ಹೇಳಿದೆ.

ಈ ಹೂಡಿಕೆಯಿಂದ 6 ರಿಂದ 7 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದ್ದು, ಶೇ.75 ಉದ್ಯೋಗ ಸ್ಥಳೀಯರಿಗೇ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೂ ಉದ್ಯೋಗಾವಕಾಶ ವಿಸ್ತರಿಸಲಾಗುತ್ತದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ ರಂಜನ್ ಪ್ರಕಾಶ್ ಠಾಕೂರ್ ತಿಳಿಸಿದ್ದಾರೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ

ಅಲ್ಲದೆ, ಯುಎಇ ಸಂಸ್ಥಾನವು ಲೋಹಗಳು, ಖನಿಜಗಳು, ಪೆಟ್ರೋ ಕೆಮಿಕಲ್‍ಗಳು ಮತ್ತು ಪೆಟ್ರೋಲಿಯಂ ಸೇರಿದಂತೆ ಸುಮಾರು 90 ಪ್ರತಿಶತ ಸರಕುಗಳ ಮೇಲೆ ಸುಂಕ ಕಡಿತಗೊಳಿಸುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಫೆಬ್ರವರಿಯಲ್ಲೇ ಭಾರತದೊಂದಿಗೆ ಸಹಿ ಹಾಕಿವೆ. ಇದನ್ನೂ ಓದಿ: ಕತ್ತಿಗೆ ಮಚ್ಚು ಹಿಡಿದು ಮನೆಯ ಸದಸ್ಯರ ಕೂಡಿ ಹಾಕಿ ಫಿಲ್ಮಿ ಸ್ಟೈಲ್‌ ದರೋಡೆ

Comments

Leave a Reply

Your email address will not be published. Required fields are marked *