ನಿಂತಿದ್ದ ಮುಸ್ಲಿಂ ಯುವಕರ ಮೇಲೆ ಭಜರಂಗದಳ ಕಾರ್ಯಕರ್ತರಿಂದ ಹಲ್ಲೆ – ಲವ್‌ ಜಿಹಾದ್‌ ಆರೋಪ

ಗಾಂಧೀನಗರ: ಅಹಮದಾಬಾದ್‌ನ (Ahmedabad) ಸಿಂಧು ಭವನ ರಸ್ತೆಯ ಗರ್ಬಾ ಸ್ಥಳದಲ್ಲಿ ನಾಲ್ವರು ಮುಸ್ಲಿಂ ಯುವಕರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನವರಾತ್ರಿಯಲ್ಲಿ ಇತರ ಧರ್ಮದ ಜನರು ಭಾಗವಹಿಸದಂತೆ ತಡೆಯಲು ಭಜರಂಗದಳದ (Bajarang Dal) ಸ್ವಯಂಸೇವಕರು ಎರಡು ಸ್ಥಳಗಳಲ್ಲಿ ತಪಾಸಣೆ ನಡೆಸಿದರು. ಎಚ್ಚರಿಕೆಯ ಹೊರತಾಗಿಯೂ ಇತರ ಧರ್ಮದ ನಾಲ್ವರು ಯುವಕರು ಒಂದು ಸ್ಥಳದಲ್ಲಿ ಕಾಣಿಸಿಕೊಂಡರು. ಲವ್‌ ಜಿಹಾದ್‌ (Love Jihad) ತಡೆಯಲು ನಮ್ಮ ಸ್ವಯಂಸೇವಕರು ಅವರನ್ನು ಹಿಡಿದು ಥಳಿಸಿದ್ದಾರೆ ಎಂದು ಗುಜರಾತ್‌ ವಿಹೆಚ್‌ಪಿ ವಕ್ತಾರ ಹಿತೇಂದ್ರ ಸಿನ್ಹಾ ರಜಪೂತ್‌ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ – ವಿವಾದಿತ ಹೇಳಿಕೆಗೆ ಕ್ಷಮೆಯಾಚಿಸಿದ ಐಎಎಸ್ ಅಧಿಕಾರಿ

https://twitter.com/Mr_ManmohanSing/status/1575123183820120064

ಸ್ಕೈ ಯುನಿವರ್ಸಲ್ ಗಾರ್ಬಾ ಸ್ಥಳದ ಹೊರಗೆ ಭಜರಂಗದಳದವರು, “ಲವ್ ಜಿಹಾದ್” ವಿರುದ್ಧದ ಸಂದೇಶಗಳನ್ನು ಪ್ರದರ್ಶಿಸುವ ಫಲಕಗಳನ್ನು ಹಿಡಿದಿದ್ದಾರೆ. ಅಲ್ಲದೇ ಯುವಕರು, ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ನಿಂತಿದ್ದ ಮುಸ್ಲಿಂ ಯುವಕರ ಹಣೆಗೆ ಬಲವಂತವಾಗಿ ತಿಲಕ ಇಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಮತ್ತೊಂದು ವೀಡಿಯೊದಲ್ಲಿ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ಸುಮಾರು 30 ಮಂದಿ ಭಜರಂಗದಳದವರು ನಿಂದಿಸಿ ಥಳಿಸಿದ್ದಾರೆ. ಬಟ್ಟೆ ಹರಿದಿರುವ ವ್ಯಕ್ತಿ ತನ್ನನ್ನು ಸಲ್ಮಾನ್ ಶೇಖ್ ಎಂದು ಗುರುತಿಸಿಕೊಂಡಿದ್ದು, ತನ್ನನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ಪಿಎಫ್‍ಐ ಬ್ಯಾನ್ ವಿರೋಧಿಸಿದರೆ ಜನ ಒದೆಯುತ್ತಾರೆ – ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹಲ್ಲೆ ನಡೆಸಿರುವ ಜವಾಬ್ದಾರಿಯನ್ನು ಬಲಪಂಥೀಯ ಸಂಘಟನೆ ವಹಿಸಿಕೊಂಡರೂ ನಗರ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಡಿಸಿಪಿ ಬಿ.ಯು.ಜಡೇಜಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಯಾವುದೇ ದೂರುದಾರರು ಮುಂದೆ ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *