ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕಟ್ – ಶಿಕ್ಷಕಿ ವಜಾ

ಸಾಂದರ್ಭಿಕ ಚಿತ್ರ

ಗಾಂಧೀನಗರ: ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ಗುಜರಾತ್‌ನ (Gujarat) ಖಾಸಗಿ ಶಾಲೆಯಲ್ಲಿ ನಡೆದಿದೆ.

ಮಂಗಳವಾರ (ಸೆ.23) ವಿದ್ಯಾರ್ಥಿನಿ ಶಾಲೆಗೆ ತೆರಳಿದಾಗ ತಲೆಗೂದಲಿಗೆ ಎಣ್ಣೆ ಹಚ್ಚಿರಲಿಲ್ಲ. ಇದನ್ನು ಕಂಡ ದೈಹಿಕ ಶಿಕ್ಷಕಿ ವಿದ್ಯಾರ್ಥಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಇದನ್ನೂ ಓದಿ: ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

ಮನೆಗೆ ಮರಳಿದ ಮಗಳ ಕೂದಲು ಗಮನಿಸಿದಾಗ ಪೋಷಕರಿಗೆ ವಿಷಯ ತಿಳಿದಿದ್ದು, ಕೂಡಲೇ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಶಿಕ್ಷಕಿಯನ್ನು ವಜಾಗೊಳಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿನಿಯ ತಾಯಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಶಿಕ್ಷೆ ಕೊಡುತ್ತಾರೆ. ಒಂದು ಪುಸ್ತಕ ಮರೆತರೂ ಕೂಡ 100 ಬಸ್ಕಿ ಹೊಡೆಸುತ್ತಾರೆ. ಇದರಿಂದ ನಮ್ಮ ಮಕ್ಕಳು ಶಾಲೆಯೆಂದರೆ ಹೆದರುತ್ತಾರೆ. ಇದಕ್ಕೂ ಮುನ್ನ ಈ ಶಾಲೆಯಲ್ಲಿ ಇದೇ ರೀತಿಯ ವಿಷಯಗಳು ನಡೆದಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಶಿಕ್ಷಣ ಅಧಿಕಾರಿ ವಿಪುಲ್ ಮೆಹ್ತಾ ಮಾತನಾಡಿ, ಎರಡು ಶಾಲೆಗಳ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಎರಡೂ ಪ್ರಕರಣದಲ್ಲಿಯೂ ಮಕ್ಕಳ ಕೂದಲು ಕತ್ತರಿಸುವ ಬಗ್ಗೆ ಆರೋಪಿಸಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌