ಕೋಬ್ರಾ ಹಿಡಿದು ಗರ್ಬಾ ಡ್ಯಾನ್ಸ್ ಮಾಡಿದ ಮಹಿಳೆಯರ ಬಂಧನ

ಗಾಂಧಿನಗರ: ನಾಗರಹಾವನ್ನು ಹಿಡಿದು ಗುಜರಾತಿ ಗರ್ಬಾ ನೃತ್ಯ ಮಾಡಿದ 13 ವರ್ಷದ ಬಾಲಕಿ ಸೇರಿ ಮೂರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ನವರಾತ್ರಿ ಉತ್ಸವದಲ್ಲಿ ಗುಜರಾತ್‍ನ ಶಿಲ್ ಎಂಬ ಗ್ರಾಮದಲ್ಲಿ ಮಹಿಳೆಯರು ಕೈಯಲ್ಲಿ ನಾಗರಹಾವನ್ನು ಹಿಡಿದು ಗರ್ಬಾ ನೃತ್ಯವನ್ನು ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈಗ ಹಾವನ್ನು ಹಿಡಿದು ಡ್ಯಾನ್ಸ್ ಮಾಡಿದ ಮಹಿಳೆಯರ ವಿರುದ್ಧ ದೂರು ದಾಖಲಾಗಿದೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ವೈರಲ್ ಆದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಹಾವು ಹಿಡಿದು ನೃತ್ಯ ಮಾಡಿದ ಇಬ್ಬರು ಮಹಿಳೆಯರು, 12 ವರ್ಷದ ಬಾಲಕಿ, ಕಾರ್ಯಕ್ರಮ ಸಂಯೋಜಕರು ಮತ್ತು ಹಾವನ್ನು ಸರಬರಾಜು ಮಾಡಿದವನು ಸೇರಿ ಒಟ್ಟು ಐದು ಜನರನ್ನು ಅರೆಸ್ಟ್ ಮಾಡಿದ್ದೇವೆ. ಜೊತೆಗೆ 12 ವರ್ಷದ ಬಾಲಕಿಯನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ನಾವು ಎರಡು ನಾಗರಹಾವುಗಳನ್ನು ನೋಡಬಹುದು. ಇದರಲ್ಲಿ ಒಂದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತದೆ. ಆದರೆ ಮಹಿಳೆ ಒಂದು ಕೈಯಲ್ಲಿ ಕತ್ತಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಹಾವನ್ನು ಹಿಡಿದುಕೊಂಡಿರುತ್ತಾಳೆ. ಇನ್ನೊಂದು ಹಾವನ್ನು ಮತ್ತೊಬ್ಬ ಮಹಿಳೆ ಎರಡು ಕೈಯಲ್ಲಿ ಹಿಡಿದುಕೊಂಡಿರುತ್ತಾಳೆ. ಇನ್ನುಳಿದ ಮಹಿಳೆಯರು ಇವರ ಸುತ್ತ ಗರ್ಬಾ ಡ್ಯಾನ್ಸ್ ಮಾಡುತ್ತಿರುತ್ತಾರೆ.

https://twitter.com/puneet_bhp/status/1183054083852124160

ಈ ಪ್ರಕರಣದಕ್ಕೆ ಸಂಬಂಧಿಸಿದ ಎಲ್ಲರನ್ನೂ ಬಂಧಿಸಿರುವ ಪೊಲೀಸರು, ಐವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸ್ಥಳೀಯ ನ್ಯಾಯಾಲಯ ಐವರಿಗೂ ಜಾಮೀನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *