ಸೆಕ್ಸ್ ವೇಳೆ ಕಾಂಡೋಮ್ ಬದಲು ಗಮ್ ಹಚ್ಚಿ ಪ್ರಾಣವೇ ಕಳ್ಕೊಂಡ!

ಗಾಂಧಿನಗರ: ಯುವಕನೊಬ್ಬ ಸೆಕ್ಸ್ ವೇಳೆ ಕಾಂಡೋಮ್ ಧರಿಸುವ ಬದಲು ಗಮ್ ಹಚ್ಚಿ ಕೊನೆಗೆ ಪ್ರಾಣಬಿಟ್ಟ ಅಚ್ಚರಿಯ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದೆ.

ಮೃತನನ್ನು ಸಲ್ಮಾನ್ ಮಿರ್ಜಾ(25) ಎಂದು ಗುರುತಿಸಲಾಗಿದೆ. ಈತ ಮೂಲತಃ ಅಹಮದಾಬಾದ್‍ನ ಫತೇವಾದಿ ಪ್ರದೇಶದವನೆಂದು ತಿಳಿದು ಬಂದಿದೆ. ಸಲ್ಮಾನ್ ಲೈಂಗಿಕ ಕ್ರಿಯೆ ನಡೆಸಲು ಕಾಂಡೋಮ್ ಬದಲು ಎಪೋಕ್ಸಿ ಅಡೆಸಿವ್ ಎಂಬ ಗಮ್ ಬಳಸಿ ಸಾವನ್ನಪ್ಪಿದ್ದಾನೆ.

ತನ್ನ ಮಾಜಿ ಪ್ರಿಯತಮೆಯೊಂದಿಗೆ ಸಲ್ಮಾನ್ ಹೋಟೆಲ್‍ಗೆ ಹೋಗಿದ್ದನು. ಹೀಗೆ ಹೋದ ಇಬ್ಬರೂ ಸೆಕ್ಸ್ ನಡೆಸಲು ಇಚ್ಛಿಸಿದ್ದಾರೆ. ಆದರೆ ಮಾಜಿ ಪ್ರೇಯಸಿ ಗರ್ಭಾವತಿಯಾಗಬಾರದೆಂದು ಎಚ್ಚರವಹಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಕಾಂಡೋಮ್ ಇಲ್ಲದ ಕಾರಣ ಸಲ್ಮಾನ್, ತನ್ನ ಮರ್ಮಾಂಗಕ್ಕೆ ಗಮ್ ರೂಪದ ವಸ್ತು ಹಚ್ಚಿದ್ದಾನೆ. ಪರಿಣಾಮ ಸಲ್ಮಾನ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ-ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ

ಇತ್ತ ಜುಹಾಪುರದ ಹೋಟೆಲ್ ಬಳಿ ಪೊದೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಲ್ಮಾನ್ ಪತ್ತೆಯಾಗಿದ್ದಾನೆ. ಸ್ನೇಹಿತ ಫಿರೋಜ್ ಶೇಖ್ ಪೊದೆಯಲ್ಲಿ ಬಿದ್ದಿದ್ದ ಸ್ನೇಹಿತನನ್ನು ಕಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಕೂಡಲೇ ಸಲ್ಮಾನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಸಲ್ಮಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಲಾಟೆ ಮಾಡಿ ತಲೆಗೆ ಕಲ್ಲಲ್ಲಿ ಹೊಡೆದು ಹುಡುಗಿಯನ್ನು ದೂರ ಕರೆದೊಯ್ದು ರೇಪ್ ಮಾಡಿದ್ರು: ಯುವಕ

ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ಅಂಟನ್ನು ಒಳಗೊಂಡಿರುವ ಮಾದಕದ್ರವ್ಯವನ್ನು ಕಿಕ್ ಪಡೆಯಲು ಬಳಸುತ್ತಿದ್ದನು. ಅಲ್ಲದೇ ಗರ್ಭಧಾರಣೆ ತಪ್ಪಿಸಲು ಅವರು ಖಾಸಗಿ ಅಂಗಕ್ಕೆ ಅಂಟನ್ನು ಬಳಸಿದ್ದಾನೆ. ದುರದೃಷ್ಟವಶಾತ್ ಸಲ್ಮಾನ್ ಅಂಗಗಳು ಹಾನಿಗೊಳಗಾಯಿತು. ಪರಿಣಾಮ ಸಲ್ಮಾನ್ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ.

ನಾವು ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆ ಮಾಡಿದ್ದೇವೆ ಮತ್ತು ಸಲ್ಮಾನ್ ತನ್ನ ಮಾಜಿ ಭಾವಿಪತ್ನಿಯೊಂದಿಗೆ ಹೋಟೆಲ್ ಒಳಗೆ ಪ್ರವೇಶಿಸುವುದನ್ನು ನೋಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *