ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!

ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ.

ಈ ಮದುವೆಯ ಗುಜರಾತ್‍ನ ಪಾಲ್ಘರ್ ನಲ್ಲಿ ಏಪ್ರಿಲ್ 22ರಂದು ನಡೆಯಲಿದೆ. ಮದುವೆ ಆಮಂತ್ರಣ ಪತ್ರದಲ್ಲಿ ವರ ಹಾಗೂ ಇಬ್ಬರು ವಧುಗಳ ಹೆಸರುಗಳನ್ನು ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೂ ಮುಂಚಿತವಾಗಿಯೇ ವರ ಮೂರು ಮಕ್ಕಳ ತಂದೆಯಾಗಿದ್ದಾನೆ.

ಸಂಜಯ್ ವರನಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಅನಾಥನಾಗಿರುವ ಸಂಜಯ್‍ಗೆ 10 ವರ್ಷಗಳ ಹಿಂದೆ ಬೇಬಿ ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸಿದರು. ಇಬ್ಬರು ಮದುವೆಯಾಗದೇ ಒಟ್ಟಿಗೆ ವಾಸಿಸುತ್ತಿದ್ದರು. ಈ ಮಧ್ಯೆ ಬೇಬಿ ಒಂದು ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. 2011ರಲ್ಲಿ ಸಂಜಯ್ ರೀನಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಈಕೆಯೂ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ.

ಸಂಜಯ್ ಮದುವೆಗೂ ಮುನ್ನವೇ ಬೇಬಿ ಮತ್ತು ರೀನಾರಿಂದ ಮೂರು ಮಕ್ಕಳನ್ನು ಹೊಂದಿದ್ದಾನೆ. ಮಕ್ಕಳು ಬೆಳೆದಾಗ, ಮೂವರು ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಏಪ್ರಿಲ್ 22 ರಂದು ಪಾಲ್ಘರ್ ನಲ್ಲಿ ಸಂಜಯ್ ಬೇಬಿ ಮತ್ತು ರೀನಾ ಕೈಹಿಡಿದು ಸಪ್ತಪದಿ ತುಳಿಯಲಿದ್ದಾನೆ.

ನನ್ನ ಮೂರು ಮಕ್ಕಳು ಶಾಲೆಗೆ ಹೋಗುತ್ತಿದ್ದು, ಮೂರು ಮಕ್ಕಳ ದಾಖಲಾತಿಗಳಲ್ಲಿ ನನ್ನ ಹೆಸರು ಇದೆ. ಜನರು ನನ್ನ ಮಕ್ಕಳನ್ನು ದೂಷಿಸಲು ಬಯಸುವುದಿಲ್ಲ. ಆದ್ದರಿಂದ ನಾನು ಇಬ್ಬರೂ ಮದುವೆಯಾಗುತ್ತಿದ್ದೇನೆ. ಮತ್ತೊಂದೆಡೆ, ಈ ಇಬ್ಬರೂ ಮಹಿಳೆಯರು ನನ್ನನೇ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ.

ಬುಡಕಟ್ಟು ಪ್ರದೇಶಗಳಲ್ಲಿ ವರನೊಬ್ಬನ ಇಬ್ಬರನ್ನು ವಿವಾಹವಾಗುವುದು ಸಾಮಾನ್ಯ ಎಂದು ಪೊಲೀಸರು ಹೇಳಿದ್ದಾರೆ.

ಆದಿವಾಸಿಗಳು ವಾಸವಾಗಿರುವ ಧರಂಪುರ ಮತ್ತು ಕಪರಾಡ ಕ್ಷೇತ್ರಗಳಲ್ಲಿ ಈ ರೀತಿಯ ಮದುವೆಗಳು ನಡೆಯುತ್ತಿರುತ್ತವೆ. ಮದುವೆಯಾಗಲು ಹಣವಿಲ್ಲದ ಕಾರಣ ಪತಿ-ಪತ್ನಿಯಂತೆ ಇರಲು ಆರಂಭಿಸುತ್ತಾರೆ. ಮುಂದೆ ಆರ್ಥಿಕವಾಗಿ ಸದೃಢರಾಗುತ್ತಿದ್ದಂತೆ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಆಗುತ್ತಾರೆ. ಇದೀಗ ಈ ರೀತಿಯ ಮದುವೆಗಳು ಕಡಿಮೆ ಆಗುತ್ತಿವೆ ಎಂದು ವರದಿಯಾಗಿವೆ.

Comments

Leave a Reply

Your email address will not be published. Required fields are marked *