ಮೋದಿ ತವರಲ್ಲಿ ಸುಲಭವಾಗಿ ಕಮಲಕ್ಕೆ ಸಿಗಲ್ಲ ಜಯ- ಚುನಾವಣಾ ಸಮೀಕ್ಷೆ ಏನು ಹೇಳುತ್ತೆ?

ನವದೆಹಲಿ: ಎಬಿಪಿ ರಾಷ್ಟ್ರೀಯ ಹಿಂದಿ ವಾಹಿನಿ ಗುಜರಾತ್ ನಲ್ಲಿ ಸಮೀಕ್ಷೆ ನಡೆಸಿದ್ದು, ಬಿಜೆಪಿ ಈ ಬಾರಿ ಗುಜರಾತ್ ನಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಆದರೂ ಬಿಜೆಪಿಗೆ ಕಾಂಗ್ರೆಸ್ ಭಾರೀ ಪೈಪೋಟಿ ನೀಡುವ ಅಂಕಿ ಅಂಶಗಳು ಹೊರಬಿದ್ದಿವೆ.

ಎಬಿಪಿ ನ್ಯೂಸ್- ಸಿಎಸ್‍ಡಿಎಸ್ ಒಪೀನಿಯನ್ ಪೋಲ್ ಸಮೀಕ್ಷೆ ಪ್ರಕಾರ ಒಟ್ಟು 182 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಗೆ 95 ಸ್ಥಾನಗಳು ಬರುವ ಸಾಧ್ಯತೆ ಇದ್ದು ಕಾಂಗ್ರೆಸ್ ಗೆ 82 ಸ್ಥಾನ ಸಿಗುವ ಸಾಧ್ಯತೆ ಇದೆ.

ಮೀಸಲಾತಿಗಾಗಿ ಹೋರಾಟ ನಡೆಸಿ ಬಿಜೆಪಿ ಪಾಲಿಗೆ ಮಗ್ಗಲು ಮುಳ್ಳಾಗಿರುವ ಹಾರ್ದಿಕ್ ಪಟೇಲ್ ಬಿಜೆಪಿ ಪಾಲಿಗೆ ದೊಡ್ಡ ಕಂಟಕ ತಂದಿಡುವುದು ಸ್ಪಷ್ಟವಿದೆ. ಏಕೆಂದರೆ ಸಮೀಕ್ಷೆ ಪ್ರಕಾರ ಪಾಟೀದಾರ್ ಸಮುದಾಯ ಹೆಚ್ಚಾಗಿರುವ ದಕ್ಷಿಣ ಗುಜರಾತ್ ನಲ್ಲಿ ಬಿಜೆಪಿ ಶೇಕಡಾ 40ರಷ್ಟು ಮತ ಪಡೆಯಲಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇಕಡಾ 11ರಷ್ಟು ಮತ ಪ್ರಮಾಣ ಕಡಮೆಯಾಗಲಿದೆ. ಇದೇ ಪ್ರದೇಶದಲ್ಲಿ ಕಾಂಗ್ರೆಸ್ ಶೇಕಡಾ 42ರಷ್ಟು ಮತ ಪಡೆಯುವ ಮೂಲಕ ಕಳೆದ ಬಾರಿಗಿಂತ ಶೇಕಡಾ 9ರಷ್ಟು ಹೆಚ್ಚಿನ ಮತ ಪಡೆಯಲಿದೆ.

ದಕ್ಷಿಣ ಗುಜರಾತ್ : (ಒಟ್ಟು ಸ್ಥಾನ-35)
ಬಿಜೆಪಿ : ಶೇಕಡಾ 40  (-11).
ಕಾಂಗ್ರೆಸ್ : ಶೇಕಡಾ 42 (+9)

ಇನ್ನೂ ಪಾಟೀದಾರರು ಹಾಗೂ ಆದಿವಾಸಿಗಳ ಮತ ಹೆಚ್ಚಿರುವ ಸೌರಾಷ್ಟ್ರ ಭಾಗದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಶೇಕಡಾ 3ರಷ್ಟು ಹೆಚ್ಚು ಮತ ಅಂದರೆ 45ರಷ್ಟು ಮತ ಪಡೆಯಲಿದೆ. ಕಾಂಗ್ರೆಸ್ ಗೆ ಕಳೆದ ಬಾರಿಗಿಂತ ಶೇಕಡಾ 3ರಷ್ಟು ಮತ ಪ್ರಮಾಣ ಕಡಮೆ ಆಗಲಿದ್ದು ಶೇಕಡಾ 39ರಷ್ಟು ಮತ ಗಳಿಸಲಿದೆ.

ಸೌರಾಷ್ಟ್ರ – ಕಛ್ ಭಾಗ : (ಒಟ್ಟು ಸ್ಥಾನ-54)
ಬಿಜೆಪಿ : ಶೇಕಡಾ 45 (+3)
ಕಾಂಗ್ರೆಸ್ : ಶೇಕಡಾ 39 (-3)

ಮಧ್ಯ ಗುಜರಾತ್ ಭಾಗದಲ್ಲಿ ಉದ್ದಿಮೆದಾರರು ಹೆಚ್ಚಾಗಿದ್ದು, ಕಾಂಗ್ರೆಸ್ ಗೆ ಶೇಕಡಾ 40ರಷ್ಟು ಮತ ಸಿಗಲಿದ್ದು, ಬಿಜೆಪಿಗೆ ಶೇಕಡಾ 41ರಷ್ಟು ಮತ ಸಿಗಲಿದೆ. ಈ ಪ್ರದೇಶದಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಶೇಕಡಾ 13ರಷ್ಟು ಮತ ಪ್ರಮಾಣ ಕಡಮೆ ಆಗಲಿದೆ.

ಮಧ್ಯ ಗುಜರಾತ್ : (ಒಟ್ಟು ಸ್ಥಾನ- 40)
ಬಿಜೆಪಿ : ಶೇಕಡಾ 41 (-13)
ಕಾಂಗ್ರೆಸ್ : ಶೇಕಡಾ 40 (+2)

ಉತ್ತರ ಗುಜರಾತ್ ನಲ್ಲಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಭಾಗದಲ್ಲಿ ಬಿಜೆಪಿ ಶೇಕಡಾ 45ರಷ್ಟು ಮತ ಪಡೆಯಲಿದೆ. ಕಳೆದ ಬಾರಿಗಿಂತ ಶೇಕಡಾ 1ರಷ್ಟು ಹೆಚ್ಚಿನ ಮತ ಗಳಿಸಲಿದ್ದು, ಕಾಂಗ್ರೆಸ್ ಬರೋಬ್ಬರಿ ಶೇಕಡಾ 49ರಷ್ಟು ಮತ ಗಳಿಸಲಿದೆ.

ಉತ್ತರ ಗುಜರಾತ್ : (ಒಟ್ಟು ಸ್ಥಾನ-53)
ಬಿಜೆಪಿ : ಶೇಕಡಾ 45 (+1)
ಕಾಂಗ್ರೆಸ್ : ಶೇಕಡಾ 49

ಪಾಟೀದಾರರ ಹೋರಾಟದ ಬಿಸಿ, ನೋಟ್ ಬ್ಯಾನ್ ಎಫೆಕ್ಟ್, ಜಿಎಸ್‍ಟಿ ಬಿಜೆಪಿ ಗೆ ತಟ್ಟುವುದು ಸ್ಪಷ್ಟವಾಗಲಿದೆ. ಗುಜರಾತ್‍ನಲ್ಲಿ ಡಿಸೆಂಬರ್ 9 ಹಾಗೂ 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

ಒಟ್ಟು ಸ್ಥಾನಗಳು: 182
ಬಿಜೆಪಿ : 95
ಕಾಂಗ್ರೆಸ್ : 82
ಇತರೆ : 5

Comments

Leave a Reply

Your email address will not be published. Required fields are marked *