ಗುಜರಾತ್‍ನಲ್ಲಿ 8 ಬುಲೆಟ್ ಟ್ರೈನ್ ನಿಲ್ದಾಣಗಳ ಅಡಿಪಾಯ ಕಾಮಗಾರಿ ಪೂರ್ಣ

ಗಾಂಧಿನಗರ: ಗುಜರಾತ್‍ನಲ್ಲಿ (Gujarat) ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ (Bullet Train) ಯೋಜನೆಯ 8 ರೈಲು ನಿಲ್ದಾಣಗಳಿಗೆ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ನರ್ಮದಾ ನದಿಯ ಮೇಲಿನ ಸೇತುವೆಯ ನಿರ್ಮಾಣ ಕೂಡ ಒಳಗೊಂಡಿದೆ ಎಂದು ಯೋಜನೆಯ ನಿರ್ದೇಶಕ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ಕಾಮಗಾರಿಗಳ ಪ್ರಯತ್ನಗಳು ಮುಂದುವರಿಯುತ್ತಿವೆ. ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೋರೇಷನ್‌ ಲಿಮಿಟೆಡ್ (NHSRCL), ಕಾರಿಡಾರ್ ಉದ್ದಕ್ಕೂ ಶಬ್ದ ತಡೆಗಳನ್ನು ಅಳವಡಿಸುವ ಕೆಲಸ ನಡೆಸುತ್ತಿದೆ. ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

ಶಬ್ದ ತಡೆಗೋಡೆಗಳು 2 ಮೀಟರ್ ಎತ್ತರ ಮತ್ತು 1 ಮೀಟರ್ ಅಗಲದ ಕಾಂಕ್ರೀಟ್ ಪ್ಯಾನಲ್‍ಗಳಾಗಿವೆ. ಈ ಪ್ಯಾನಲ್‍ಗಳು ಪ್ರತಿಯೊಂದೂ 830-840 ಕೆ.ಜಿಯಷ್ಟು ತೂಗುತ್ತದೆ. ಈ ಶಬ್ದ ತಡೆಗೋಡೆಗಳು ರೈಲಿನ ಟ್ರ್ಯಾಕ್ ಮತ್ತು ಚಕ್ರದ ನಡುವಿನ ಘರ್ಷಣೆಯಿಂದ ಉಂಟಾಗುವ ಶಬ್ದಕ್ಕೆ ತಡೆ ಉಂಟುಮಾಡಿ ಚದುರಿಸುತ್ತದೆ ಎಂದು ತಿಳಿಸಿದ್ದಾರೆ.

ಯೋಜನೆಯಡಿ ಗುಜರಾತ್ ವಿಭಾಗದಲ್ಲಿ 21 ಕಿಮೀ ಸಮುದ್ರದ ಸುರಂಗ ಮತ್ತು 1.4 ಕಿಮೀ ನರ್ಮದಾ ನದಿಯ ಮೇಲೆ ಸೇತುವೆಯ ನಿರ್ಮಾಣದ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು