ಅಪಘಾತದಲ್ಲಿ ಎರಡು ಕೈ, ಕಾಲು ಕಳೆದುಕೊಂಡ್ರೂ ಎದೆಗುಂದದ ವಿದ್ಯಾರ್ಥಿ

– 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು ಸಿದ್ಧ
– ಮೊಣಕೈ ಬಳಸಿ ಬರೆಯೋದನ್ನ ಕಲಿತ ವಿದ್ಯಾರ್ಥಿ

ಗಾಂಧಿನಗರ: ಸಾಮಾನ್ಯವಾಗಿ ಕೆಲವರು ಅಪಘಾತದಲ್ಲಿ ಕೈ ಅಥವಾ ಕಾಲು ಕಳೆದುಕೊಂಡರೆ ನಮ್ಮ ಜೀವನ ಇಷ್ಟೆ ಎಂದು ಮನೆಯಲ್ಲಿಯೇ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಅಪಘಾತದಲ್ಲಿ ಎರಡು ಕೈ, ಕಾಲು ಕಳೆದುಕೊಂಡರು 12ನೇ ತರಗತಿಯ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.

ಗುಜರಾತ್‍ನ ವಡೋದರಾದಲ್ಲಿ ಈ ಘಟನೆ ನಡೆದಿದೆ. ಶಿವಂ ಸೋಲಂಕಿ ಕೈ ಮತ್ತು ಕಾಲು ಇಲ್ಲದಿದ್ದರೂ ಪರೀಕ್ಷೆ ಬರೆಯಲಿದ್ದಾರೆ. ಶಿವಂ 13ನೇ ವಯಸ್ಸಿನಲ್ಲಿದ್ದಾಗ ಅಪಘಾತವೊಂದರಲ್ಲಿ ತನ್ನ ಎರಡು ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಆದರೂ ತನ್ನ ಶಿಕ್ಷಣದ ಕನಸನ್ನು ಬಿಡದೆ ಮೊಣಕೈಯನ್ನು ಬಳಸಿ ಹೇಗೆ ಬರೆಯಬೇಕೆಂದು ಕಲಿತಿದ್ದು, ಇದೀಗ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಬರೆದಿಯಲು ಸಿದ್ಧನಾಗಿದ್ದಾರೆ.

ಶಿವಂ ಸೋಲಂಕಿ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ 81 ರಷ್ಟು ಅಂಕಗಳನ್ನು ಗಳಿಸಿದ್ದರು. ತಾನೇ ಮೊಣಕೈಯನ್ನು ಬಳಸಿ ಬರೆಯುವುದು ಹೇಗೆ ಎಂದು ಕಲಿತುಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಶಿವಂ ಸೋಲಂಕಿ, “ನಾನು ಪರೀಕ್ಷೆ ಬರೆಯಲು ಸಿದ್ಧನಾಗಿದ್ದೇನೆ. ಈ ವರ್ಷವೂ ನಾನು ಉತ್ತಮ ಅಂಕಗಳನ್ನು ಗಳಿಸುತ್ತೇನೆ ಎಂದು ನಾನು ಭಾವಿಸುತ್ತೇನೆ. ನಾನು 10ನೇ ಬೋರ್ಡ್ ಪರೀಕ್ಷೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಅಂಕ ಗಳಿಸುತ್ತೇನೆ” ಎಂದು ಹೇಳಿದ್ದಾರೆ.

ಜೊತೆಗೆ ಇತರ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದ್ದಾರೆ. “ಇದು ಕೇವಲ ಒಂದು ಪರೀಕ್ಷೆ. ಈ ಪರೀಕ್ಷೆ ನಿಮ್ಮ ಇಡೀ ಜೀವನವು ಹೇಗೆ ಎಂಬುದನ್ನು ನಿರ್ಧರಿಸುವುದಿಲ್ಲ. ಆದ್ದರಿಂದ ಅದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಡಿ. ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಂಡು ಉತ್ತಮವಾಗಿ ಮಾಡಿ” ಎಂದು ಹೇಳಿದ್ದಾರೆ.

ನನ್ನ ಮಗನಿಗೆ ಅವನ ಶಾಲೆಯಿಂದ ಸಾಕಷ್ಟು ಸಹಾಯ ಮತ್ತು ಬೆಂಬಲ ದೊರೆತಿದೆ. ಶಿಕ್ಷಕರು ಕೂಡ ಮಗನಿಗೆ ಪೋತ್ಸಾಹ ಕೊಟ್ಟಿದ್ದಾರೆ ಎಂದು ಶಿವಂ ಸೋಲಂಕಿ ಅವರ ತಂದೆ ಹೇಳಿದರು.

Comments

Leave a Reply

Your email address will not be published. Required fields are marked *