ಕೊರೊನಾ ಪ್ರಕರಣ ಹೆಚ್ಚಳ- ಅಪಾರ್ಟ್‍ಮೆಂಟ್, ಶಾಲಾ-ಕಾಲೇಜುಗಳಿಗೆ ಮಾರ್ಗಸೂಚಿ ಬಿಡುಗಡೆ

CORONA-VIRUS.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್‍ಗಳ ಹೆಚ್ಚಳ ಬೆನ್ನಲ್ಲೇ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದೆ. ಅಪಾರ್ಟ್‍ಮೆಂಟ್, ಶಾಲಾ-ಕಾಲೇಜುಗಳಲ್ಲಿ ಕೊರೊನಾ ಕೇಸ್‍ಗಳು ದಾಖಲಾದ್ರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಅಪಾರ್ಟ್‍ಮೆಂಟ್‍ಗಳಿಗೆ ಮಾರ್ಗಸೂಚಿ: 3- ರಿಂದ 5 ಪ್ರಕರಣ ದಾಖಲಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಬೇಕು. 15ಕ್ಕಿಂತ ಹೆಚ್ಚು ಪ್ರಕರಣ ದಾಖಲಾದಲ್ಲಿ ಎಲ್ಲರಿಗೂ ರ್‍ಯಾಪಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು. ಸೋಂಕಿನ ಲಕ್ಷಣ ಇಲ್ಲದಿದ್ದಕ್ಕೆ ಕೊರೊನಾ ಟೆಸ್ಟ್ ಅಗತ್ಯವಿಲ್ಲ. ಮನೆ ಕೆಲಸದವರು 60 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಮನೆಕೆಲಸಗಾರರು, ಸಿಬ್ಬಂದಿಗೆ N 95 ಮಾಸ್ಕ್ ಕಡ್ಡಾಯ. ಕೊರೊನಾ ಪತ್ತೆಯಾದಲ್ಲಿ ಪಾರ್ಕ್, ಸ್ವಿಮ್ಮಿಂಗ್‍ಪೂಲ್, ಕ್ಲಬ್‍ಹೌಸ್‍ಗಳು ಕ್ಲೋಸ್ ಮಾಡಬೇಕು. ಸೋಂಕು ಕಂಡು ಬಂದ ಫ್ಲೋರ್, ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೋಂಕು ಬಂದ್ರೆ ಕಡ್ಡಾಯ ರಜೆ ಹಾಕಬೇಕು. ಈ ಎಲ್ಲಾ ಮಾರ್ಗಸೂಚಿಗಳು ಖಾಸಗಿ ಕಚೇರಿಗಳಿಗೂ ಅನ್ವಯವಾಗಲಿದೆ. ಇದನ್ನೂ ಓದಿ: ಅಗ್ಗದ ಹೋಟೆಲ್ ರೂಂ, ಆಸ್ಪತ್ರೆ ಸೇವೆ ಇನ್ನಷ್ಟು ದುಬಾರಿ

12 ನೇ ತರಗತಿಯವರೆಗೆ ಈ ರೂಲ್ಸ್ ಫಾಲೋ ಮಾಡಬೇಕು: ಕೋವಿಡ್ 19 ಲಕ್ಷಣ ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸುವುದು. ಕೋವಿಡ್ ಲಕ್ಷಣ ಇದ್ದರೆ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು ಮತ್ತು ಪಾಸಿಟಿವ್ ಬಂದ್ರೆ ಐಸೋಲೇಟ್ ಮಾಡಬೇಕು. ರ್‍ಯಾಪಿಡ್ ಆಂಟಿಜನ್ ನಲ್ಲಿ ನೆಗೆಟಿವ್ ಇದ್ದರೆ ಆರ್‌ ಟಿಪಿಸಿಆರ್ ಟೆಸ್ಟ್ ಮಾಡಿಸಿ ರಿಸಲ್ಟ್ ಬರುವವರೆಗೂ ಐಸೋಲೇಟ್ ನಲ್ಲಿ ಇಡಬೇಕು. ಕ್ಲಸ್ಟರ್ ಮತ್ತು ಸಾಂಕ್ರಾಮಿಕ ರೋಗಗಳು ವರದಿಯಾದಲ್ಲಿ ರೋಗ ಲಕ್ಷಣ ಇರುವವರಿಗೆ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಬೇಕು. ಪಾಸಿಟಿವ್ ಆದರೆ ವ್ಯಕ್ತಿಯ ಲಕ್ಷಣಗಳನ್ನು ಆಧರಿಸಿ ಐಸೋಲೇಟ್ ಮಾಡಬೇಕು. ಅಲ್ಲದೆ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಸೂಚಿಸಬೇಕು.

corona

ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಪಾಸಿಟಿವ್ ಪ್ರಕರಣಗಳಿಂದ ಹೆಚ್ಚುವರಿಯಾಗಿ ಆರ್ಟಿಪಿಸಿಆರ್ ಕಲೆಕ್ಟ್ ಮಾಡಬೇಕು. ಆರ್ ಟಿಪಿಸಿಆರ್ ಪಾಸಿಟಿವ್ ಫಲಿತಾಂಶದಲ್ಲಿ ಸಿಟಿ ವ್ಯಾಲ್ಯೂ 25 ಇದ್ದರೆ ಜೆನೆಮಿಕ್ ಸೀಕ್ವೆನ್ಸ್‌ಗೆ ಕಳಿಸಬೇಕು. ಪಾಸಿಟಿವ್ ಪ್ರಕರಣ ಪತ್ತೆಯಾದ ಶಾಲೆಗಳ ಕೊಠಡಿಗಳನ್ನ 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಸ್ವಚ್ಫಗೊಳಿಸಬೇಕು ಮತ್ತು ಮರುದಿನದಿಂದ ಕೊಠಡಿಗಳನ್ನ ಪುನರ್ ಬಳಕೆ ಮಾಡಬಹುದು. ಕೊವಿಡ್ ರೂಲ್ಸ್ ಮಾಸ್ಕ್, ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಮತ್ತು ಜ್ವರ, ಶೀತ, ನೆಗಡಿ ಇದ್ದರೆ ವೈದ್ಯಕೀಯ ತಪಾಸಣೆ ಮಾಡಬೇಕು. ಎಲ್ಲಾ ಕೊವಿಡ್ ರೂಲ್ಸ್ ಪಾಲನೆ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಶಾಲೆ ಮುಚ್ಚುವಂತಿಲ್ಲ.

Live Tv

Comments

Leave a Reply

Your email address will not be published. Required fields are marked *