ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ

ರಾಂಚಿ: ಶಾಲೆಯ ಮುಖ್ಯ ಶಿಕ್ಷಕ ಕುಡಿಯಲು ಪೋಷಕರಿಂದ ಹಣ ಪಡೆದಿದ್ದಾನೆ. ಅಲ್ಲದೇ ಶಾಲೆಯ ವಾಚ್‍ಮ್ಯಾನ್ ಅಶ್ಲೀಲ ವೀಡಿಯೋ ನೋಡಿ ಲೈಂಗಿಕ ಕಿರುಕುಳ ನೀಡುತ್ತಾನೆ ಎಂದು ವಸತಿ ಶಾಲೆಯ (School) ವಿದ್ಯಾರ್ಥಿನಿಯರು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದ ಪ್ರಕರಣ ಜಾರ್ಖಂಡ್‍ನ (Jharkhand) ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯರು ಬರೆದ ಪತ್ರದಲ್ಲಿ ನಾವು ತುಂಬಾ ಶೋಚನೀಯ ಸ್ಥಿತಿಯಲ್ಲಿ ಓದುತ್ತಿದ್ದೇವೆ. ಶಾಲೆಯ ಕಾವಲುಗಾರ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಾನೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಾನೆ. ಅಲ್ಲದೇ ನಿಂದನೆ ಮಾಡುತ್ತಾನೆ. ನಾವು ತುಂಬಾ ಭಯ ಮತ್ತು ನೋವಿನಲ್ಲಿದ್ದೇವೆ. ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿವಾಹೇತರ ಸಂಬಂಧ ಆರೋಪ – ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಇಷ್ಟೇ ಅಲ್ಲದೇ, ತಮ್ಮ ವಿರುದ್ಧ ಜಾತಿ ಆಧಾರಿತ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ವಸತಿ ಶಾಲೆಯಲ್ಲಿನ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಮನೆಕೆಲಸಗಳನ್ನು ಮಾಡಲು ಮನೆಗೆ ಕರೆದೊಯ್ಯುತ್ತಿದ್ದಾರೆ. ಕುಡಿಯಲು ಪ್ರಾಂಶುಪಾಲ ತಮ್ಮ ಪೋಷಕರಿಂದ ಹಣ ಪಡೆಯುತ್ತಾರೆ ಎಂದು ವಿದ್ಯಾರ್ಥಿನಿಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಮಾಜ ಕಲ್ಯಾಣ (Welfare Department) ಇಲಾಖೆ ನಡೆಸುತ್ತಿರುವ ಶಾಲೆಯ ಹಲವಾರು ವಿದ್ಯಾರ್ಥಿನಿಯರ ಪತ್ರದ ಆಧಾರದ ಮೇಲೆ ನಾಲ್ವರು ಶಿಕ್ಷಕರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ (FIR) ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ತಪಸ್ ವಿಮಾನ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]