ಮೈಸೂರು: ಕುಮಾರಸ್ವಾಮಿ ನಾವು ಹೇಗಿದ್ದೆವೋ ಹಾಗೆಯೇ ಇದ್ದೇವೆ. ನಾವು ಬದಲಾವಣೆಯಾಗಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್‍ನಿಂದ ಗೆದ್ದಿದ್ದೇನೆ, ಮೂರು ವರ್ಷ ಅವಧಿ ಇನ್ನೂ ಇದೆ. ಇಡೀ ದೇಶದಲ್ಲಿ ರಾಜಕೀಯ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಕುಮಾರಸ್ವಾಮಿ ನಾವು ಹೇಗಿದ್ದೆವೋ ಹಾಗೆಯೇ ಇದ್ದೇವೆ. ನಾವು ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರು ಗಟ್ಟಿಯಾಗಿದ್ದು, ಪಕ್ಷ ಗಟ್ಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ದೈವ ಬಲವಿದೆ. ಹಾಗಾಗಿ ಕುಮಾರಸ್ವಾಮಿ ಸಿಎಂ ಆದರು. ಎಲ್ಲರೂ ಅವಕಾಶಕ್ಕೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಎಲ್ಲರೂ ಅಧಿಕಾರಕ್ಕಾಗಿ ಹೋಗುತ್ತಾರೆ. ಇದನ್ನು ಜನರೂ ಒಪ್ಪುತ್ತಾರೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಕುಮಾರಸ್ವಾಮಿ ಅವರಿಗೆ ಇನ್ನೂ ವರ್ಚಸ್ಸಿದೆ. ಹೀಗಾಗಿ ಅವರು ಸಹ ಮತ್ತೆರಡು ಬಾರಿ ಮುಖ್ಯಮಂತ್ರಿ ಆಗಬಹುದು ಎಂದು ಎಚ್‍ಡಿಕೆ ಪರ ಮಾತನಾಡಿದರು.
ನಾನು ಜೆಡಿಎಸ್‍ನಿಂದ ಗೆದ್ದಿದ್ದೇನೆ. ಮೂರು ವರ್ಷ ಎಲ್ಲಿಗೂ ಹೋಗಲು ಆಗುವುದಿಲ್ಲ. ಮೂರು ವರ್ಷ ಜೆಡಿಎಸ್‍ನಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನವರಿಗೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಈಗ ನಡೆಯುತ್ತಿರುವುದು ಅಧಿಕಾರ ರಾಜಕೀಯ ಮಾತ್ರ. ಇದನ್ನು ಜನರೂ ಒಪ್ಪಿಕೊಂಡಿದ್ದಾರೆ. ಯಾರಿಗೂ ಸಿದ್ಧಾಂತದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.


Leave a Reply