ಹೆಸ್ಕಾಂ ಮೀಟರ್ ರೀಡರ್ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

ಕಾರವಾರ: ಹೆಸ್ಕಾಂ ಮೀಟರ್ ರೀಡರ್ ನ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಗಟೆಬೈಲಿನಲ್ಲಿ ನಡೆದಿದೆ.

ಈಶ್ವರ್ ನಾಯ್ಕ ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆಗೊಳಗಾದವರು ಭಟ್ಕಳದ ಪುರಸಭೆ ಅಂಗಡಿ ತೆರವು ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕ ಸಹೋದರನಾಗಿದ್ದು, 4 ಜನರ ಗುಂಪು ಈಶ್ವರ್ ನಾಯ್ಕ ಗೆ ಹಿಂದಿನಿಂದ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.

ಈ ವೇಳೆ ಹಲ್ಲೆಕೋರರಿಂದ ತಪ್ಪಿಸಿಕೊಂಡ ಈಶ್ವರ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಈ ಹಿಂದೆ ಇವರ ಸಹೋದರ ರಾಮಚಂದ್ರ ನಾಯ್ಕ ಪುರಸಭೆ ಅಂಗಡಿ ತೆರವು ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಟ್ಕಳದಲ್ಲಿ ಎರಡು ಕೋಮುಗಳ ನಡುವೆ ವಿರಸಕ್ಕೆ ಕಾರಣವಾಗಿತ್ತು.

ಈ ಹಿನ್ನಲೆಯಲ್ಲಿ ಹಲ್ಲೆ ಮಾಡಿರುಬಹುದೆಂದು ಈಶ್ವರ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *