ಮದುವೆಗೆ ಹೆಚ್‍ಡಿ ಕುಮಾರಸ್ವಾಮಿ ಬರಬೇಕೆಂದು ಉಪವಾಸ ಕುಳಿತ ವರ

ಮಂಡ್ಯ: ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ಮದುವೆಗೆ ಬರಬೇಕೆಂದು ವರನೇ ಉಪವಾಸ ಕುಳಿತಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

30 ವರ್ಷದ ರವಿ ಉಪವಾಸ ಕುಳಿತಿರುವ ವರ. ಇವರಿಗೆ ಡಿಸೆಂಬರ್ 1 ರಂದು ಮದುವೆ ನಿಶ್ಚಯವಾಗಿದೆ. ಅಂದು ನನ್ನ ಮದುವೆಗೆ ಕುಮಾರಸ್ವಾಮಿ ಅವರು ಬರಬೇಕೆಂದು ಆಗ್ರಹಿಸಿ ಉಪವಾಸ ಕುಳಿತಿದ್ದಾರೆ.

ಕುಮಾರಸ್ವಾಮಿ ಅವರ ಅಭಿಮಾನಿಯಾಗಿರುವ ವರ ರವಿ, ಅವರನ್ನು ಮದುವೆಗೆ ಕರೆಸಲು ಜೆಡಿಎಸ್ ಮುಖಂಡರ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಕುಮಾರಸ್ವಾಮಿ ಬರುವ ಬಗ್ಗೆ ಜೆಡಿಎಸ್ ಮುಖಂಡರು ಯಾವುದೇ ಭರವಸೆ ಕೊಡಲಿಲ್ಲ. ಇದರಿಂದ ಮನನೊಂದು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ತಮ್ಮ ಮನೆಯ ಮುಂದೆ ಉಪವಾಸ ಕುಳಿತಿದ್ದಾರೆ.

ಅಷ್ಟೇ ಅಲ್ಲದೇ ಲಗ್ನಪತ್ರಿಕೆ, ಕುಮಾರಸ್ವಾಮಿ ಅವರ ಫೋಟೋವನ್ನು ಮುಂದೆ ಇಟ್ಟುಕೊಂಡು ಮದುವೆಗೆ ಬರಲೇಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *