ಮದ್ವೆಯಾದ 2 ವಾರದ ನಂತ್ರ ಪತ್ನಿಯ ನಿಜ ರೂಪ ನೋಡಿ ವರನಿಗೆ ಶಾಕ್

– ಪೊಲೀಸ್ರು ವಧುವಿನ ಬಟ್ಟೆ ಬಿಚ್ಚಿದಾಗ ರಹಸ್ಯ ಬಯಲು

ಕಂಪಾಲಾ: ವರನೊಬ್ಬನಿಗೆ ಮದುವೆಯಾದ ಎರಡೇ ವಾರದಲ್ಲಿ ತನ್ನ ಪತ್ನಿ ಹುಡುಗಿಯಲ್ಲ, ಪುರುಷ ಎಂಬ ವಿಚಾರ ಗೊತ್ತಾಗಿದ್ದು, ಇದರಿಂದ ವರ ಸೇರಿದಂತೆ ಕುಟುಂಬದವರು ಶಾಕ್ ಆಗಿರುವ ಘಟನೆ ಉಗಾಂಡದಲ್ಲಿ ನಡೆದಿದೆ.

ಮೊಹಮ್ಮದ್ ಮುತುಂಬ ವಧು ವೇಷಧಾರಿಯಲ್ಲಿದ್ದ ಹುಡುಗನನ್ನು ಮದುವೆಯಾಗಿದ್ದನು. ಮೊಹಮ್ಮದ್ ಎರಡು ವಾರಗಳ ಹಿಂದಯಷ್ಟೇ ವಧುವಿನ ಜೊತೆ ಸಾಂಪ್ರದಾಯಿಕ ನಿಖಾ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದನು. ಅಲ್ಲದೇ ನವ ದಂಪತಿ ಮದುವೆಯ ಒಪ್ಪದಕ್ಕೂ ಸಹಿ ಹಾಕಿದ್ದರು. ಮದುವೆಯಾದ ನಂತರ ವಧುವಿನ ವೇಷಧಾರಿಯಾಗಿದ್ದ ಹುಡುಗ ತಾನು ಋತುಮತಿಯಾಗಿದ್ದೇನೆಂದು ಪತಿಯ ಬಳಿ ಸುಳ್ಳು ಹೇಳಿ ಫಸ್ಟ್ ನೈಟ್ ಕ್ಯಾನ್ಸಲ್ ಮಾಡಿದ್ದನು.

ಪತಿ ಮೊಹಮ್ಮದ್ ಆತನ ಮಾತು ನಂಬಿಕೊಂಡು ಆಕೆಯೇ ಇಷ್ಟಪಟ್ಟು ತನ್ನ ಬಳಿ ಬರಲಿ ಎಂದು ತಾಳ್ಮೆಯಿಂದ ಕಾಯುತ್ತಿದ್ದನು. ಇತ್ತ ಮೊಹಮ್ಮದ್ ನೆರೆಹೊರೆಯವರು ವಧುವಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಮೊಹಮ್ಮದ್ ಪತ್ನಿ ಟಿವಿ, ಬಟ್ಟೆ ಮತ್ತು ಕೆಲ ವಸ್ತುಗಳನ್ನು ಕಳ್ಳತನ ಮಾಡಿ ಮನೆಯ ಗೋಡೆಯಿಂದ ಹಾರಿ ಹೋಗುತ್ತಿರುವುದನ್ನು ನೋಡಿದ್ದಾರೆ. ಆಗ ಪಕ್ಕದ ಮನೆಯವರಿಗೆ ಮೊಹಮ್ಮದ್ ಪತ್ನಿಯ ಮೇಲೆ ಅನುಮಾನ ಬಂದಿದ್ದು, ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನೆರೆಹೊರೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಮೊಹಮ್ಮದ್ ತನ್ನ ಪತ್ನಿಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ. ಪೊಲೀಸ್ ಠಾಣೆಗೂ ಆತ ಸಾಂಪ್ರದಾಯಿಕವಾದ ಉಡುಪನ್ನು ಧರಿಸಿಕೊಂಡು ಬಂದಿದ್ದನು. ಹೀಗಾಗಿ ಪೊಲೀಸರು ಕೂಡ ಆತನನ್ನು ನೋಡಿ ಮೊದಲಿಗೆ ಅನುಮಾನ ಬಂದಿರಲಿಲ್ಲ. ಈ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮೊಹಮ್ಮದ್ ಪತ್ನಿಯನ್ನು ಪ್ರತ್ಯೇಕವಾದ ಸೆಲ್‍ಗೆ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಿದ್ದಾರೆ.

ಆಗ ವಧುವಿನ ರೂಪದಲ್ಲಿ ಒಬ್ಬ ಪುರುಷನಿದ್ದನ್ನು ನೋಡಿ ಮಹಿಳಾ ಅಧಿಕಾರಿ ಶಾಕ್ ಆಗಿದ್ದಾರೆ. ಕೊನೆಗೆ ಆತನ ಬಟ್ಟೆಯವನ್ನು ಬಿಚ್ಚಿಸಿದಾಗ ಹುಡುಗಿಯ ರೀತಿ ಮೇಕಪ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಪೊಲೀಸರು ವಿಚಾರಣೆ ಮಾಡಿದ ನಂತರ, ನಾನು ಹಣಕ್ಕಾಗಿ ಈ ರೀತಿ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *