ಮದುವೆಯ ದಿನವೇ ವರನ ಸಹೋದರಿ ಸಾವು- ಸಂಭ್ರಮವಿದ್ದ ಮನಯಲ್ಲೀಗ ಸೂತಕದ ಛಾಯೆ

ಬಳ್ಳಾರಿ: ಆ ಮನೆಯಲ್ಲಿ ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಆದ್ರೆ ವಿದ್ಯುತ್ ಸ್ಪರ್ಶದಿಂದ ವರನ ಸಹೋದರಿ ಸಾವನ್ನಪ್ಪಿದ್ದು ಇದೀಗ ಸೂತಕದ ಛಾಯೆ ಆವರಿಸಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟರು ತಾಲೂಕಿನ ಚಪ್ಪರದಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಗ್ರಾಮದ ಮಂಜುನಾಥ ಎನ್ನುವವರ ಮದುವೆ ಸಮಾರಂಭವಿತ್ತು. ಮದುವೆ ಸಂಭ್ರಮದಲ್ಲಿದ್ದ ವರನ ಸಹೋದರಿ ಹಂಪಮ್ಮ(30) ಒಣಗಲು ಹಾಕಿದ್ದ ಬಟ್ಟೆ ತಗೆಯುವಾಗ ವಿದ್ಯುತ್ ತಗುಲಿದೆ. ಈ ವೇಳೆ ತಂದೆ ವೀರಣ್ಣ ಹಂಪಮ್ಮನಿಗೆ ತಗುಲಿದ ವಿದ್ಯುತ್ ಸ್ಪರ್ಶ ತಪ್ಪಿಸಲು ಹೋದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಹಂಪಮ್ಮ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಹಂಪಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಸಹೋದರ ಮಂಜುನಾಥನ ಮದುವೆಯನ್ನು ಸರಳವಾಗಿ ಮಾಡಲಾಗಿದೆ. ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *