ಸಲಿಂಗ ವಿವಾಹಕ್ಕೆ ಗ್ರೀಸ್‌ ಗ್ರೀನ್‌ ಸಿಗ್ನಲ್‌ – ಕಾನೂನುಬದ್ಧಗೊಳಿಸಿದ ಮೊದಲ ರಾಷ್ಟ್ರ

ಅಥೆನ್ಸ್‌: ಆರ್ಥೊಡಾಕ್ಸ್‌ ಕ್ರಿಶ್ಚಿಯನ್‌ ಬಹುಸಂಖ್ಯಾತರಿರುವ ಗ್ರೀಸ್‌ನಲ್ಲಿ (Greece) ಸಲಿಂಗ ವಿವಾಹವನ್ನು (Same-Sex Marriage) ಕಾನೂನುಬದ್ಧಗೊಳಿಸಲಾಗಿದೆ. ಸಲಿಂಗ ವಿವಾಹ ಮಾನ್ಯಗೊಳಿಸಿದ ಜಗತ್ತಿನ ಮೊದಲ ದೇಶವಾಗಿ ಗ್ರೀಸ್‌ ಹೊರಹೊಮ್ಮಿದೆ.

ಸಂಸತ್ತಿನಲ್ಲಿ, ಸಲಿಂಗ ದಂಪತಿಯು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಈ ಹೊಸ ಕಾನೂನು ಅಸಮಾನತೆಯನ್ನು ನಿರ್ಮೂಲನೆ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇಗುಲ ಉದ್ಘಾಟಿಸಿದ PM ಮೋದಿ- ಫೋಟೋಗಳಲ್ಲಿ ನೋಡಿ

ಆದರೆ ಈ ಕಾನೂನಿಗೆ ಆರ್ಥೊಡಾಕ್ಸ್‌ ಚರ್ಚ್‌ ನೇತೃತ್ವದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ಅಥೆನ್ಸ್‌ನಲ್ಲಿ ಪ್ರತಿಭಟನಾ ರ‍್ಯಾಲಿ ಕೂಡ ನಡೆಸಲಾಗಿದೆ. ರಾಜಧಾನಿಯ ಸಿಂಟಾಗ್ಮಾ ಸ್ಕ್ವೇರ್‌ನಲ್ಲಿ ಅನೇಕರು ಬ್ಯಾನರ್‌, ಶಿಲುಬೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬೈಬಲ್‌ ಸಾಲುಗಳನ್ನು ಸಹ ವಾಚಿಸಿದ್ದಾರೆ.

ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಆರ್ಚ್‌ಬಿಷಪ್ ಐರೋನಿಮೋಸ್, ಈ ಕ್ರಮವು ತಾಯ್ನಾಡಿನ ಸಾಮಾಜಿಕ ಒಗ್ಗಟ್ಟನ್ನು ಭ್ರಷ್ಟಗೊಳಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. 300 ಸದಸ್ಯ ಬಲದ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಲು ಸರಳ ಬಹುಮತದ ಅಗತ್ಯವಿದೆ. ಇದನ್ನೂ ಓದಿ: ಭಾರತೀಯ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ದುಬೈನಲ್ಲಿ ಭೂಮಿ: UAE ಘೋಷಣೆಗೆ ಮೋದಿ ಕೃತಜ್ಞತೆ