ಜೈಲಿನಿಂದ ಹೊರಬಂದ ರೌಡಿಗೆ ಅದ್ಧೂರಿ ಸ್ವಾಗತ

ಕಲಬುರಗಿ: ವಿದೇಶಕ್ಕೆ ಹೋಗಿ ಬಂದಾಗ ಅಥವಾ ಸಮಾಜ ಮುಖಿ ಕೆಲಸ ಮಾಡಿದ್ರೆ ಅದ್ಧೂರಿ ಸ್ವಾಗತ ಮಾಡಲಾಗುತ್ತದೆ. ಆದ್ರೆ ಕಲಬುರಗಿಯಲ್ಲಿ ಜೈಲಿಂದ ಬಿಡುಗಡೆಯಾದ ರೌಡಿಶೀಟರ್‍ಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಕಲಬುರಗಿಯ ಮಂಗರವಾಡಿ ನಿವಾಸಿ ವೀರತಾ ಉಪಾಧ್ಯ ಎಂಬ ರೌಡಿ ಶೀಟರ್, ಏಪ್ರಿಲ್ 21ರಂದು ವಿಜಯ ಬಗಲಿ ಎಂಬ ಯುವಕನನ್ನು ಕೊಲೆ ಮಾಡಿ ಜೈಲು ಸೇರಿದ್ದನು. ಎರಡು ದಿನದ ಹಿಂದೆ ಜೈಲಿನಿಂದ ಬೇಲ್ ಮೇಲೆ ಹೊರ ಬಂದಿದ್ದಾನೆ. ಹೀಗೆ ಬರುವಾಗ ಆತನನ್ನು ವಿಶೇಷವಾಗಿ ಸ್ವಾಗತಿಸಲಾಗಿದೆ.

ಜೈಲಿನಿಂದ ಬರುವಾಗ ಹವಾ ಇರಲಿ ಅಂತಾ ಬಡಾವಣೆಯಲ್ಲಿ ಬೌನ್ಸರ್‍ಗಳ ಸಮೇತ ಅದ್ಧೂರಿ ಮೆರವಣಿಗೆ ಮೂಲಕ ಆತನನ್ನು ಕರೆತರಲಾಗಿದೆ. ಈ ಮೂಲಕ ರೌಡಿಗಳು ಕಲಬುರಗಿಯಲ್ಲಿ ತಮ್ಮ ಇಮೇಜ್ ನ ಬಿಲ್ಡಪ್ ನೀಡುತ್ತಿದ್ದಾರೆ. ಅಲ್ಲದೇ ರೌಡಿಗಳಿಗೆ ಪೊಲೀಸರ ಭಯ ಇಲ್ಲವಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *