ಮದುವೆ ಸಮಾರಂಭದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ಕುಣಿದ ಗ್ರಾಪಂ ಸದಸ್ಯರು

ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹುಚ್ಚಾಟ ಮೆರೆದಿದ್ದಾರೆ. ಎಲ್ಲರೆದರೂ ಯುವತಿಯರೊಂದಿಗೆ ಅಸಹ್ಯವಾಗಿ ಕುಣಿದು ಅಸಭ್ಯ ವರ್ತನೆ ತೋರಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ ಮೈಚಳಿ ಬಿಟ್ಟು ಸದಸ್ಯರು ಕುಣಿದು ಕುಪ್ಪಳಿಸಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ. ಬಾಯದೊಡ್ಡಿ, ಕುರುಬದೊಡ್ಡಿ, ಗೌಸನಗರ, ಕಡಗಂದೊಡ್ಡಿ, ವಡವಟ್ಟಿ ಗ್ರಾಮ ಪಂಚಾಯತ್‍ನ ಸದಸ್ಯರು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

ಮೇ 26 ರಂದು ನಡೆದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ. ಹೈದರಾಬಾದ್‍ನಿಂದ ನೃತ್ಯ ಮಾಡಲು ಯುವತಿಯರನ್ನು ಕರೆಸಲಾಗಿತ್ತು. ಈ ವೇಳೆ ಜನಪ್ರತಿನಿಧಿಗಳು ಎಂಬುವುದನ್ನು ಮರೆತು ಯುವತಿಯರ ಮೇಲೆ ಹಣ ಎಸೆದು ನೃತ್ಯ ಮಾಡಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

Comments

Leave a Reply

Your email address will not be published. Required fields are marked *