ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

nirmala sithraman

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ಭಾರತದ ವಿದೇಶಿ ವ್ಯಾಪಾರದ ಮೇಲೆ ಅದರಲ್ಲೂ ವಿಶೇಷವಾಗಿ ಕೃಷಿ ವಲಯದ ರಫ್ತಿನ ಮೇಲೆ ಪರಿಣಾಮ ಬೀರುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತಂಕ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ವ್ಯಾಪಾರ ಮತ್ತು ಉದ್ಯಮದ ನಾಯಕರೊಂದಿಗಿನ ಸಭೆ ನಡೆಸಿದ ನಂತರ ಸೀತಾರಾಮನ್ ಅವರು, ರಷ್ಯಾ-ಉಕ್ರೇನ್ ದೇಶಗಳ ಸಂಘರ್ಷ ದಿನದಿಂದ ದಿನಕ್ಕೆ ಹೇಗೆ ಭಾರತದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಚರ್ಚೆ ಮಾಡಿದ್ದಾರೆ. ನಂತರ ಈ ಕುರಿತು ಮಾತನಾಡಿದ ಅವರು, ರಷ್ಯಾ-ಉಕ್ರೇನ್ ದೇಶಗಳ ಸಂಘರ್ಷವನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ದೇಶದ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಆರ್ಮಿ ಪಬ್ಲಿಕ್ ಶಾಲೆಯಲ್ಲಿ 1,300 ಸಸಿ ನೆಟ್ಟಿದ ಕಮಾಂಡಿಂಗ್ ಮೇಜರ್ ಜನರಲ್!

ಉಕ್ರೇನ್ ನಲ್ಲಿ ಸಿಲುಕಿರುವವರ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಅವರನ್ನು ನಾವು ಕರೆದುಕೊಂಡು ಬರುತ್ತೇವೆ. ಆದರೆ ಉಕ್ರೇನ್ ಮತ್ತು ರಷ್ಯಾಕ್ಕೆ ವಿಶೇಷವಾಗಿ ಕೃಷಿ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ರಫ್ತುದಾರರಿಗೆ ಏನಾಗಲಿದೆ ಎಂಬುದರ ಕುರಿತು ನಾನು ಹೆಚ್ಚು ಚಿಂತಿತನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರವು ಈಗಾಗಲೇ ಉದ್ಭವಿಸಿರುವ ಪರಿಸ್ಥಿತಿಯನ್ನು ನೋಡುತ್ತಿದೆ. ಆದರೆ ನಾನು ವಿವಿಧ ಸಂಬಂಧಿತ ಸಚಿವಾಲಯಗಳ ಮೂಲಕ ಸಂಪೂರ್ಣ ಮೌಲ್ಯಮಾಪನವನ್ನು ಹೊಂದಿರಬೇಕು. ಆಗ ಮಾತ್ರ ನಾನು ಅದರ ಬಗ್ಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

ಉಕ್ರೇನ್ ಸೂರ್ಯಕಾಂತಿ ಎಣ್ಣೆ ಬೀಜಗಳು ಮತ್ತು ರಸಗೊಬ್ಬರಗಳ ಪ್ರಮುಖ ಪೂರೈಕೆದಾರ ಆಗಿದೆ. ಈ ಯುದ್ಧದಿಂದ ಪೂರೈಕೆಯಲ್ಲಿನ ಅಡಚಣೆಯು ಖಾದ್ಯ ತೈಲದಂತಹ ಅಗತ್ಯ ಸರಕುಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.

Comments

Leave a Reply

Your email address will not be published. Required fields are marked *