ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ದುರ್ವರ್ತನೆ: ವಾಟ್ಸಪ್‍ನಲ್ಲೇ ಅಧಿಕಾರಿಯ ಲವ್ವಿ-ಡವ್ವಿ!

ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ದುರ್ವರ್ತನೆ ತೋರಿದ್ದು, ಕೇವಲ ನೆಪಮಾತ್ರಕ್ಕೆ ಸಭೆಗೆ ಹಾಜರಿರುವಂತೆ ವರ್ತಿಸಿದ್ದಾರೆ. ಕೆಲವು ಅಧಿಕಾರಿಗಳು ವಾಟ್ಸಪ್ ನಲ್ಲೇ ಲವ್ವಿ-ಡವ್ವಿ ನಡೆಸುವಲ್ಲಿ ನಿರತರಾಗಿದ್ದಾರೆ.

ಇಂದು ನಗರದ ಜಿಲ್ಲಾ ಪಂಚಾಯತ್‍ನ ಕೆಡಿಪಿ ಸಭೆಯು ಅಧಿಕಾರಿಗಳ ದುರ್ವರ್ತನೆಗೆ ಸಾಕ್ಷಿಯಾಗಿದೆ. ಜನರ ಸಮಸ್ಯೆಗಳನ್ನು ಚರ್ಚಿಸದೇ ಅಧಿಕಾರಿಗಳು ಕೇವಲ ಚಾಟಿಂಗ್ ಹಾಗೂ ಮೊಬೈಲ್‍ನಲ್ಲೆ ಲವ್ವಿ-ಡವ್ವಿ ನಡೆಸುವ ಮೂಲಕ ಬ್ಯುಸಿಯಾಗಿದ್ದರು. ಕೆಲ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರು.

ಇದಲ್ಲದೇ ಅಕ್ಷರ ದಾಸೋಹ ಅಧಿಕಾರಿಯಾದ ದಾರುಕೇಶ್ ರವರು ತಮ್ಮ ವಾಟ್ಸಪ್ ನಲ್ಲೇ ಲವ್ವಿ-ಡವ್ವಿ ಮಾಡುವಲ್ಲಿ ಮಗ್ನರಾಗಿದ್ದರು. ದಾರುಕೇಶ್ ರವರು ತಮ್ಮ ವಾಟ್ಸಪ್ ನಲ್ಲಿ ಇಬ್ಬರು ಮಹಿಳೆಯರೊಂದಿಗೆ ಚಾಟಿಂಗ್ ಮಾಡುತ್ತಾ, ಮಹಿಳೆಗೆ ಐ ಲವ್ ಯು, ನಿಮ್ಮ ಮನೆಯ ಡೋರ್ ಯಾವಾಗ್ಲೂ ಕ್ಲೋಸ್, ಫೈನಲ್ ಕೇಳ್ತೀನಿ ಮನೆ ಹತ್ರ ಬರ್ತಿನಿ ಎಂದು ಚಾಟಿಂಗ್ ಮಾಡುವಲ್ಲಿ ಬ್ಯುಸಿಯಾಗಿದ್ದರು.

ಇನ್ನು ಕೆಲವು ಅಧಿಕಾರಿಗಳು ಸಭೆಯಲ್ಲೇ ನಿದ್ದೆಗೆ ಜಾರಿದ್ದರೆ, ಕೆಲವರು ತಮ್ಮ ಫೋನ್‍ಗಳಲ್ಲಿ ಬ್ಯುಸಿಯಾಗಿದ್ದರು. ಕೇವಲ ನಾಮಕಾವಸ್ತೆಗೆ ಸಭೆಗೆ ಹಾಜರಿರುವಂತೆ ಅಧಿಕಾರಿಗಳು ವರ್ತಿಸಿದ್ದಾರೆ. ಪದೇ ಪದೇ ಇಂತಹ ಪ್ರಕರಣ ಮರುಕಳಿಸಿದರೂ ಯಾವುದೇ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿಲ್ಲ. ಜನರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳೇ ಇಂತಹ ದುರ್ವರ್ತನೆ ತೋರಿದರೆ, ಜನರ ಸಮಸ್ಯೆಗಳಿಗೆ ಸ್ಫಂದಿಸುವವರು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

Comments

Leave a Reply

Your email address will not be published. Required fields are marked *