ಸೈನಿಕರ ಕುಟುಂಬದವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧ: ಬೊಮ್ಮಾಯಿ

ಬೆಂಗಳೂರು: ಸೈನಿಕರ ಕುಟುಂಬದವರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‌ಮೆಂಟ್ ಟ್ರಸ್ಟ್ ಆಯೋಜಿಸಿದ್ದ ವಿಜಯ ದಿವಸ ಸಮಾರಂಭವನ್ನು ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಸಿಎಂ, ಭಾರತ ಸ್ವಾತಂತ್ರ‍್ಯ ಪೂರ್ವ ಹಾಗೂ ನಂತರದಲ್ಲಿ ಬಾಂಗ್ಲಾ ವಿಮೋಚನೆ, ಕಾರ್ಗಿಲ್ ಸೇರಿದಂತೆ ಅನೇಕ ಯುದ್ಧಗಳಲ್ಲಿ ಕರ್ನಾಟಕದ ಯೋಧರು (Soldiers) ತಮ್ಮ ಪ್ರಾಣ ತ್ಯಾಗ ಮಾಡಿ ಭಾರತಕ್ಕೆ ವಿಜಯ ತಂದುಕೊಟ್ಟಿದ್ದಾರೆ. ಅದರ ಸ್ಮರಣಾರ್ಥವಾಗಿ ವಿಜಯ ದಿವಸ ಆಚರಣೆ ಮಾಡಲಾಗುತ್ತದೆ. ರಕ್ಷಣಾ ಪಡೆಗಳ ಸೇವೆ ಅತ್ಯಂತ ಶ್ರೇಷ್ಠ ಸೇವೆ. ಅಲ್ಲಿಗೆ ಸೇರುವ ಮುನ್ನವೇ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿರಬೇಕು ಎಂದು ಮನಗಂಡು ಸೇರುತ್ತೇವೆ. ದೇಶದ ರಕ್ಷಣೆ ಹಾಗೂ ಅದರ ಜನರಿಗಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ದೇಶಕ್ಕೆ ವಿಜಯ ಪ್ರಾಪ್ತಿಯಾಗಿದ್ದನ್ನೂ ನೋಡಲು ಅವರಿರುವುದಿಲ್ಲ. ಮಾನವೀಯತೆಯ ಅತ್ಯಂತ ಶ್ರೇಷ್ಠ ಗುಣವನ್ನು ಹೊಂದಿರುವ ಸೇವೆ ಇದು ಎಂದರು.

ಮಾನವನ ಹೊಂದಾಣಿಕೆಯ ಗುಣ ಅತ್ಯಂತ ಶ್ರೇಷ್ಠವಾದುದು. ಪ್ರತಿಕೂಲ ವಾತಾವರಣದಲ್ಲಿಯೂ ಬದುಕಿ, ಸೈನಿಕರು ಹೋರಾಡುತ್ತಾರೆ. ದೇಶವನ್ನು ವಿಜಯ ಪಥದತ್ತ ನಡೆಸಿ, ಪ್ರಾಣತ್ಯಾಗ ಮಾಡಿದ ಹಾಗೂ ಗಾಯಗೊಂಡ ಎಲ್ಲಾ ಯೋಧರಿಗೂ ಮನದಾಳದ ನಮನ ಸಲ್ಲಿಸುವುದಾಗಿ ತಿಳಿಸಿದರು. ಅವರ ಅಪ್ರತಿಮ ತ್ಯಾಗ ದೇಶಕ್ಕೆ ವಿಜಯ ತಂದು ಸುರಕ್ಷಿತವಾಗಿ ಇಟ್ಟಿದೆ. ಸಾಮಾನ್ಯ ನಾಗರಿಕರು ಶಾಂತಿಯಿಂದಿರಲು ಸಾಧ್ಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

ಯಾವುದೇ ಸಮಯದಲ್ಲಿ ಯುದ್ಧಕ್ಕೆ ತಯಾರಿರಲು ಅತ್ಯಂತ ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಅಭ್ಯಾಸವನ್ನು ಬೇಡುವ ರಕ್ಷಣಾ ಪಡೆ ಮಾನಸಿಕವಾಗಿಯೂ ಸನ್ನದ್ಧರಾಗಿರಬೇಕು. ಆಧುನಿಕ ಕಾಲದಲ್ಲಿ ತಮ್ಮ ಸರಹದ್ದನ್ನು ವಿಸ್ತರಿಸಲು ಪ್ರಯತ್ನಿಸುತ್ತವೆ. ಆದರೆ ಈ ಕಾಲದಲ್ಲಿ ಅದಕ್ಕೆ ಅವಕಾಶವಿಲ್ಲ. ಆದರೂ ಸಾಹಸವನ್ನು ಮಾಡುತ್ತಿರುತ್ತಾರೆ. ಕೆಲವು ಹಿಂದಿನ ಅನುಭವದಿಂದ ಸೈನಿಕರು ಗಡಿಯಲ್ಲಿ ಸದಾ ಸನ್ನದ್ಧರಾಗಿದ್ದಾರೆ. ಯಾವುದೇ ದೇಶ ಒಂದಿಚು ಒಳಗೆ ಬಂದರೂ ಹಿಮ್ಮೆಟ್ಟಿಸಿ ಸೋಲಿಸುವ ಶಕ್ತಿ ನಮ್ಮ ಸೈನಿಕರಿಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕಿದೆ ಎಂದು ಹೊಗಳಿದರು.

ರಕ್ಷಣಾ ಪಡೆಗಳಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದ್ದು, ನಾವು ಪ್ರಗತಿಯತ್ತ ಸಾಗಬೇಕು. ನಾಗರಿಕರಾಗಿ ದೇಶವಾಸಿಗಳಿಗೆ ಉತ್ತಮ ಜೀವನ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದು ಮಹಾಸಾಧನೆ ಅಂದ್ರು ಕಾಂಗ್ರೆಸ್ ನಾಯಕರು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *