ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆ ಸೇರಿದ್ದ ಬಾಲಿವುಡ್ ನಟ ಗೋವಿಂದ (Actor Govinda) ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಡಿಸ್ಚಾರ್ಜ್ (Discharge) ಆಗಿದ್ದಾರೆ. ಅಕ್ಟೋಬರ್ 1ರಂದು ಮನೆಯಲ್ಲಿ ಬೆಳಗ್ಗೆ 4.45ರ ಸುಮಾರಿಗೆ ತಮ್ಮದೇ ಲೈಸೆನ್ಸ್ಡ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದ ವೇಳೆ ಕಾಲಿಗೆ ಮಿಸ್‌‌ ಫೈರ್ ಆಗಿದೆ ಎಂಬುದಾಗಿ ತಿಳಿದುಬಂದಿತ್ತು. ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದ ಗೋವಿಂದ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ರಿವಾಲ್ವರ್ ಕ್ಲೀನ್ ಮಾಡುವ ವೇಳೆ ಗೋವಿಂದ ಎಡಕಾಲಿಗೆ ಗುಂಡು ತಗುಲಿದ್ದು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಇದೀಗ ವೀಲ್‌ಚೇರ್‌ನಲ್ಲಿಯೇ ಮನೆಗೆ ತೆರಳಿದ ಗೋವಿಂದ ಮೂರ್ನಾಲ್ಕು ವಾರಗಳಲ್ಲಿ ಸಂಪೂರ್ಣ ಗುಣವಾಗೋದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಪತ್ನಿ ಸುನಿತಾ ಜೊತೆ ವೀಲ್‌ಚೇರ್‌ನಲ್ಲಿ ಕುಳಿತು ಮಾಧ್ಯಮಕ್ಕೆ ಕೈ ಬೀಸಿ ನಗು ಮುಖದಲ್ಲೇ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ:ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ

 

View this post on Instagram

 

A post shared by Viral Bhayani (@viralbhayani)

ಶಿವಸೇನಾ ನಾಯಕನೂ ಆಗಿರುವ ಗೋವಿಂದ ಹಲವು ವರ್ಷಗಳಿಂದ ತಮ್ಮ ಲೈಸೆನ್ಸ್ಡ್‌ ರಿವಾಲ್ವರ್ ಬಳಸುತ್ತಿದ್ದರು. ಬೆಳ್ಳಂಬೆಳಗ್ಗೆ ಕಾರ್ಯಕ್ರಮವೊಂದಕ್ಕೆ ಪಾಲ್ಗೊಳ್ಳಲು ಗೋವಿದಂ ಅವಸರದಲ್ಲಿದ್ದರು ಎನ್ನಲಾಗ್ತಿದೆ. ಈ ನಿಮಿತ್ತ ಪ್ರಯಾಣ ಮಾಡುವ ಅವಸರದಲ್ಲಿ ರಿವಾಲ್ವರ್ ಸ್ವಚ್ಛಗೊಳಿಸುವ ವೇಳೆ ಮಿಸ್‌ ಫೈರ್ ಆಗಿ ಈ ಅವಗಢ ಸಂಭವಿಸಿದೆ ಎಂದು ಪೊಲೀಸರಿಗೆ ಗೋವಿಂದ ಹೇಳಿಕೆ ನೀಡಿದ್ದರು.

https://youtu.be/UaoBu1GbWT4?si=ilejpR2yeGn91ypj