ಇನ್ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಸಿಗಲಿದೆ ಮದುವೆ ಸರ್ಟಿಫಿಕೇಟ್: ಸರ್ಕಾರ ಆದೇಶ

ಬೆಂಗಳೂರು: ಇನ್ನು ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಮದುವೆ ಸರ್ಟಿಫಿಕೇಟ್ ಸಿಗಲಿದೆ. ಈ ಸಂಬಂಧ ಇಂದು ಸರ್ಕಾರ ಅಧಿಕೃತ ಆದೇಶವೊಂದನ್ನು ಹೊರಡಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಸರ್ಕಾರ ವಿವಾಹ ನೊಂದಣಿ ಅಧಿಕಾರವನ್ನು ಪಿಡಿಓಗಳಿಗೆ ಸರ್ಕಾರ ನೀಡಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇನ್ನು ಮುಂದೆ ಮದುವೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

ಇಷ್ಟು ದಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ನೋಂದಣಿಗೆ ಅವಕಾಶ ಇತ್ತು. ಮದುವೆ ನಡೆದ ಸ್ಥಳ ಅಥವಾ ಪತಿ-ಪತ್ನಿಯರು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಅದಕ್ಕೆ ಅಗತ್ಯವಾದ ಅರ್ಜಿ ನಮೂನೆ ಅದೇ ಕಚೇರಿಯಲ್ಲಿ ದೊರೆಯುತ್ತಿತ್ತು. ಇಲ್ಲವೇ ಅದನ್ನು ಇಂಟರ್ನೆಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿತ್ತು.

ಈ ಅರ್ಜಿಯನ್ನು ಎಚ್ಚರಿಕೆಯಿಂದ ತುಂಬಿ ನಂತರ ಮೂವರು ಸಾಕ್ಷಿಗಳು (ಸ್ನೇಹಿತರು, ಬಂಧುಗಳು) ಸಹಿ ಮಾಡಬೇಕಿತ್ತು. ಈ ಅರ್ಜಿಗೆ ವಧು-ವರ ಕೂಡ ಅಹಿ ಮಾಡಿ, ನಂತರ ಅದಕ್ಕೆ ಮೊಹರು ಹಾಕಿ ರಿಜಿಸ್ಟ್ರಾರ್ ಸಹಿ ಮಾಡುತ್ತಿದ್ದರು. ಆದರೆ ಇನ್ಮುಂದೆ ಗ್ರಾಮ ಪಂಚಾಯತಿ ಪಿಡಿಓಗೆ ಮದುವೆ ನೋಂದಣಿ ಅಧಿಕಾರವನ್ನು ಸರ್ಕಾರ ಕೊಟ್ಟಿದೆ.

Comments

Leave a Reply

Your email address will not be published. Required fields are marked *