ಉಡುಪಿ ಸೇರಿ ಹಲವೆಡೆ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರು: ಕ್ಯಾಬಿನೆಟ್ ಅಸ್ತು

– ಹಳೇ ಗುತ್ತಿಗೆದಾರರ ಅವಧಿ 2 ವರ್ಷ ವಿಸ್ತರಣೆಗೆ ಒಪ್ಪಿಗೆ
– ಪೊಲೀಸ್ ಇಲಾಖೆಗೆ ವಾಹನ ಖರೀದಿಗೆ 34 ಕೋಟಿ

ಬೆಂಗಳೂರು: ಕಾಂಗ್ರೆಸ್ ಭವನಗಳ (Congress Bhavan) ನಿರ್ಮಾಣಕ್ಕೆ ಸರ್ಕಾರಿ ಜಾಗ ಕೊಡುವುದನ್ನ ಸರ್ಕಾರ ಮುಂದುವರಿಸಿದೆ. ಇವತ್ತಿನ ಕ್ಯಾಬಿನೆಟ್‌ನಲ್ಲೂ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ.

ಮಂಡ್ಯದಲ್ಲಿ (Mandya ಕಾಂಗ್ರೆಸ್ ಭವನ ಕಟ್ಟಲು ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಿದ್ದು, 1,457 ಚಮೀ ವಿಸ್ತೀರ್ಣದ ಜಾಗವನ್ನ 30 ವರ್ಷ ಲೀಸ್‌ಗೆ ನೀಡಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಉಡುಪಿಯ ಅಂಜಾರು ಗ್ರಾಮದಲ್ಲಿ 20 ಸೆಂಟ್ಸ್ ಜಾಗ, ಕುಂದಾಪುರದಲ್ಲಿ 11 ಸೆಂಟ್ಸ್ ಜಾಗ, ನೆಲಮಂಗಲದಲ್ಲಿ 00.08 ಗುಂಟೆ ಜಾಗವನ್ನ ಮಂಜೂರು ಮಾಡಿ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

ಸಭೆಯ ಮುಖ್ಯಾಂಶಗಳೇನು?
* ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ಹೊನೆ ಉಸ್ತುವಾರಿ ಸಚಿವರ ಹೆಗಲಿಗೆ
* ಹಳೇ ಗುತ್ತಿಗೆದಾರರ ಅವಧಿಯನ್ನ 2 ವರ್ಷ ವಿಸ್ತರಣೆ ಮಾಡಲು ಒಪ್ಪಿಗೆ
* 20.47 ಕೋಟಿ ವೆಚ್ಚದಲ್ಲಿ ಕೆ-ಶೋರ್ ಯೋಜನೆಯಡಿ ಹಣ
* ಅರಣ್ಯ ಇಲಾಖೆಯಲ್ಲಿ ತಾಂತ್ರಿಕ ಹಾಗೂ ನಿರ್ವಹಣೆ ಸೇವೆಗಳಿಗೆ ಒಪ್ಪಿಗೆ
* 360 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಒಪ್ಪಿಗೆ
* ಕರಾವಳಿಯಲ್ಲಿರುವ 4 ಹಾಲಿ ಬಂದರುಗಳ ಖಾಸಗಿ ಸಹಭಾಗಿತ್ವದಲ್ಲಿ ದುರಸ್ತಿ
* 40.12 ಕೋಟಿ ವೆಚ್ಚದಲ್ಲಿ ಬಂದರುಗಳ ದುರಸ್ತಿಗೆ ಕ್ಯಾಬಿನೆಟ್ ಒಪ್ಪಿಗೆ
* ಬನಶಂಕರಿಯಲ್ಲಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ 602 ಚದುರ ಅಡಿ ನಿವೇಶನ
* ಕೋಲಾರದಲ್ಲಿ 150 ಟನ್‌ಗಳ ಸಾಮರ್ಥ್ಯದ ಹಸಿ ತ್ಯಾಜ ಘಟಕಕ್ಕೆ ಒಪ್ಪಿಗೆ
* ಗೇಲ್ ಸಂಸ್ಥೆಗೆ 9 ಎಕರೆ 38 ಗುಂಟೆ ಜಾಗ 25 ವರ್ಷಗಳ ಅವಧಿಗೆ ಲೀಸ್
* ರಾಜ್ಯದಲ್ಲಿ 8 ಕಡೆಗಳಲ್ಲಿ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ ಸ್ಥಾಪನೆ
* ಪೊಲೀಸ್ ಇಲಾಖೆಗೆ ವಾಹನ ಖರೀದಿಗೆ 34 ಕೋಟಿ
* ಮಂಡ್ಯ ಕೃಷಿ ವಿವಿಗೆ 23 ಕೋಟಿ ಅನುದಾನ
* ಶಹಾಪುರ ನಗರಸಭೆಯಲ್ಲಿ ಕನಕಭವನ ನಿರ್ಮಾಣಕ್ಕೆ 300 ಚಮೀ ಜಾಗ ಮಂಜೂರು.