ಮದುವೆ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ಕೊಟ್ಟ ಸರ್ಕಾರ!

ನವದೆಹಲಿ: ದೇಶಾದ್ಯಂತ 2 ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಿದೆ. ಆದರೆ ಕೇಂದ್ರ ಸರ್ಕಾರ ಗುರುತಿಸಿರುವ ಗ್ರೀನ್ ಝೋನ್ ಹಾಗೂ ಆರೆಂಜ್ ಝೋನ್‍ಗಳಲ್ಲಿ ಲಾಕ್‍ಡೌನ್‍ನಿಂದ ಕೆಲ ವಿನಾಯ್ತಿಗಳನ್ನು ನೀಡಲಾಗಿದೆ.

ಎಂಎಚ್‍ಎ ಆದೇಶ ಅನ್ವಯ ಮೇ.3ರ ಬಳಿಕವೂ 2 ವಾರ ಲಾಕ್‍ಡೌನ್ ಮುಂದುವರಿಯಲಿದೆ. ಆದರೆ ಹಸಿರು ವಲಯಗಳಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸಮಾರಂಭದಲ್ಲಿ ಭಾಗವಹಿಸಲು ಕೇವಲ 50 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಇದನ್ನು ಓದಿ: ಲಾಕ್‍ಡೌನ್ 3 – ಯಾವ ವಲಯದಲ್ಲಿ ಏನಿರುತ್ತೆ? ಏನಿರಲ್ಲ? ಷರತ್ತುಗಳು ಏನು?

ಅಂತ್ಯ ಸಂಸ್ಕಾರ ಹಾಗೂ ತಿಥಿ ಕಾರ್ಯಕ್ರಮಗಳಿಗೂ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದು, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸಮಾರಂಭದಲ್ಲಿ ಭಾಗವಹಿಸಲು ಕೇವಲ 20 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಯಾವ ವಲಯದಲ್ಲೂ ಮಾಡುವಂತಿಲ್ಲ ಎಂಬ ನಿಯಮ ಜಾರಿಯಾಗಿದೆ.

ಗುಡ್ ನ್ಯೂಸ್: ಸವಿತಾ ಸಮಾಜದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಗ್ರೀನ್ ಹಾಗೂ ಆರೆಂಜ್ ಝೋನ್‍ಗಳಲ್ಲಿ ಸೆಲೂನ್ ಮತ್ತು ಸ್ಪಾ ತೆರೆಯಲು ಅನುಮತಿ ನೀಡಿದೆ. ಆದರೆ ರೆಡ್ ಹಾಗೂ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಇವುಗಳಿಗೆ ನಿರ್ಬಂಧ ವಿಧಿಸಿದೆ. ಇದನ್ನು ಓದಿ: ರಾಜ್ಯದ ಮೂರು ಜಿಲ್ಲೆ ಹೊರತುಪಡಿಸಿ ಎಲ್ಲ ಕಡೆ ಎಣ್ಣೆ ಸಿಗುತ್ತೆ- ಆದ್ರೆ ಷರತ್ತು ಅನ್ವಯ

Comments

Leave a Reply

Your email address will not be published. Required fields are marked *