ಸರ್ಕಾರಿ ಬಸ್, ಟ್ರ‍್ಯಾಕ್ಟರ್ ಡಿಕ್ಕಿ – ಓರ್ವ ಯುವತಿ ಸಾವು, 18 ಜನರಿಗೆ ಗಾಯ

ರಾಯಚೂರು: ಸರ್ಕಾರಿ ಬಸ್ ಹಾಗೂ ಟ್ರ‍್ಯಾಕ್ಟರ್ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿರುವ ಘಟನೆ ರಾಯಚೂರಿನ (Raichuru) ಲಿಂಗಸುಗೂರು (Lingasugur) ತಾಲೂಕಿನ ಬನ್ನಿಗೋಳ ಗ್ರಾಮದ ಬಳಿ ನಡೆದಿದೆ.

ಮೃತ ಯುವತಿಯನ್ನು ಶ್ರೀದೇವಿ (19) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

ಬನ್ನಿಗೋಳ ಗ್ರಾಮದ ಕೂಲಿಕಾರ್ಮಿಕರು ಟ್ರ‍್ಯಾಕ್ಟರ್‌ನಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದರು. ಈ ವೇಳೆ ಬಸ್ ಎದುರಿಗೆ ಬಂದು ಡಿಕ್ಕಿ ಹೊಡೆದಿದ್ದು, ಟ್ರ‍್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಟ್ರ‍್ಯಾಕ್ಟರ್‌ನಲ್ಲಿದ್ದ ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಸ್ ಪಕ್ಕದ ಜಮೀನಿಗೆ ಇಳಿದಿದ್ದು, ಬಸ್ ಹಾಗೂ ಟ್ರಾö್ಯಕ್ಟರ್‌ನಲ್ಲಿದ್ದವರು ಸೇರಿ 18 ಜನರು ಗಾಯಗೊಂಡಿದ್ದಾರೆ. ಗಾಯಳುಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ವಿಟ್ಲ ಪಂಚಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪ್ರಭಾವಳಿಗೆ ಬಡಿದ ಡ್ರೋಣ್‌