ಬಿಡುವಿನ ವೇಳೆ ನೆಲಮಂಗಲದಲ್ಲಿರುವ ಫಾರ್ಮ್ ಹೌಸ್‍ ನಲ್ಲಿ ತಂಗುತ್ತಿದ್ದ ಗೌರಿ ಲಂಕೇಶ್

ಬೆಂಗಳೂರು: ದುಷ್ಕರ್ಮಿಗಳ ಗುಂಡಿಗೆ ಕಳೆದ ರಾತ್ರಿ ಹತ್ಯೆಯಾದ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಬಿಡುವಿನ ವೇಳೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿರುವ ತಮ್ಮ ಫಾರ್ಮ್  ಹೌಸ್ ನಲ್ಲಿ ತಂಗುತ್ತಿದ್ದರು.

ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ 5 ಎಕರೆ ವಿಸ್ತೀರ್ಣದಲ್ಲಿರುವ ಗೌರಿ ಲಂಕೇಶ್  ಫಾರ್ಮ್  ಹೌಸ್ ನಿರ್ಮಾಣ ಮಾಡಿದ್ದರು. ವಾರದಲ್ಲಿ ಎರಡು ಬಾರಿ ಗೌರಿ ಲಂಕೇಶ್ ಅವರು ತಮ್ಮ ಈ ಫಾರಂ ಹೌಸ್ ಗೆ ಭೇಟಿ ನೀಡುತಿದ್ದರು. ನಮ್ಮನ್ನು ಮನೆ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ತುಂಬಾ ಒಳ್ಳೇಯವರು ಎಂದು ತೋಟ ನೋಡಿಕೊಳ್ಳುತ್ತಿದ್ದ ರಾಜು ಹೇಳಿದ್ದಾರೆ.

ತಮ್ಮ ತೋಟದಲ್ಲಿ 100 ಅಡಿಕೆ ಮರ, ತೆಂಗು ಮಾವು ತೇಗದ ಬೆಳೆಗಳನ್ನ ನಮ್ಮ ಸಹಾಯದಿಂದ ನಿರ್ವಹಣೆ ಮಾಡಿಸಿದ್ದರು. ಬೆಂಗಳೂರಿನಿಂದ ಫಾರ್ಮ್ ಹೌಸ್ ಗೆ ಬಡ ಶಾಲಾ ಮಕ್ಕಳಿಗೆ ಗ್ರಾಮೀಣ ಕೂಟ ತಯಾರಿ ಮಾಡಿ ವಿದ್ಯಾರ್ಥಿಗಳಿಗೆ ತರಬೇತಿಯನ್ನ ನೀಡುತ್ತಿದ್ದರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಕಲಿಕೆ ಸಾಮಾಜಿಕ ಕ್ಷೇತ್ರಕ್ಕೆ ತರುವಲ್ಲಿ ಸಫಲರಾಗಿದ್ದರು ಎಂದು ತೋಟ ನೋಡಿಕೊಳ್ಳುವರು ಲೀಲಾವತಿ ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *