ಸೇತುವೆಯಿಂದ ಕಾರು ಉರುಳಿದ ಕೇಸ್‌ – ಎಫ್‌ಐಆರ್‌ ದಾಖಲು, ತನಿಖೆ ಎದುರಿಸುತ್ತಿದೆ ಗೂಗಲ್‌ ಮ್ಯಾಪ್ಸ್‌

ನವದೆಹಲಿ: ಸೇತುವೆಯಿಂದ ಕಾರು ಉರುಳಿ ಬಿದ್ದು ಮೂವರು ಸಾನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ (India) ಗೂಗಲ್‌ ಮ್ಯಾಪ್ಸ್‌ (Google Maps) ತನಿಖೆ ಎದುರಿಸುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ತನಿಖೆಗೆ ಸಹಕಾರಿಸುವುದಾಗಿ ಗೂಗಲ್‌ ಮ್ಯಾಪ್‌ ಹೇಳಿಕೊಂಡಿದೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗೂಗಲ್‌ ವಕ್ತಾರರು, ಮೃತರ ಕುಟುಂಬಕ್ಕೆ ನಾನು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. ನಾವು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಸಮಸ್ಯೆಯನ್ನು ತನಿಖೆ ಮಾಡಲು ನಾವು ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಎಂಜಿನಿಯರ್‌ಗಳು ಮತ್ತು ಗೂಗಲ್ ಮ್ಯಾಪ್ಸ್ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇಬ್ಬರು ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್‌ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಬುದೌನ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತನಿಖೆಯ ಬೆನ್ನಲ್ಲೇ ಗೂಗಲ್‌ ಮ್ಯಾಪ್‌ ಈ ಸೇತುವೆಯನ್ನು ತೋರಿಸುವ ಜಾಗದ ರಸ್ತೆ ಮಾರ್ಗವನ್ನು ತನ್ನ ನಕ್ಷೆಯಿಂದ ತೆಗೆದು ಹಾಕಿದೆ. ಇದನ್ನೂ ಓದಿ: ಬಿಜೆಪಿಗೆ ಸಿಎಂ ಪಟ್ಟ ಕೊಟ್ಟ ಶಿಂಧೆ – ಫಡ್ನಾವೀಸ್‌ ಮುಂದಿನ ಮುಖ್ಯಮಂತ್ರಿ?

ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ (Uttar Pradesh) ಫರೀದ್‌ಪುರದಲ್ಲಿ ನ.24 ರಂದು ನಡೆದಿತ್ತು. ಕಾರಿನಲ್ಲಿದ್ದ (Car) ಮೂವರು ಗೂಗಲ್‌ ಮ್ಯಾಪ್‌ ಬಳಸಿಕೊಂಡು ತೆರಳುತ್ತಿದ್ದರು. ಸೇತುವೆ ಸಂಪೂರ್ಣ ನಿರ್ಮಾಣವಾಗಿರದ ಕಾರಣ ಕಾರು ಮಧ್ಯದಲ್ಲಿ ನದಿಗೆ ಬಿದ್ದಿದೆ ಎಂದು ಪೊಲೀಸರು (Police) ತಿಳಿಸಿದ್ದರು.

ಈ ವರ್ಷ ಉಂಟಾದ ಪ್ರವಾಹದಿದ ಸೇತುವೆ ಕುಸಿದಿತ್ತು. ಸೇತುವೆಯನ್ನು ಮರು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿತ್ತು. ಇದು GPS ನಲ್ಲಿ ನವೀಕರಿಸಲಾಗಿಲ್ಲ. ಇದರಿಂದ ಚಾಲಕನ ಗಮನಕ್ಕೆ ಬಂದಿಲ್ಲ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.