ಸಚಿವಾಲಯದ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಬಂಪರ್ ಕೊಡುಗೆ

ಬೆಂಗಳೂರು: ಕರ್ನಾಟಕ ಸರ್ಕಾರ ಸಚಿವಾಲಯ ನೌಕರರಿಗೆ ಬಂಪರ್ ಕೊಡುಗೆ ಎಂಬಂತೆ ಅಧಿವೇಶನದ ಸಮಯದಲ್ಲಿ ಪ್ರತಿನಿತ್ಯ 500 ರೂ ವಿಶೇಷ ಭತ್ಯೆ (ಗೌರವ ಧನ) ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಅಧಿವೇಶನದ ಸಮಯದಲ್ಲಿ ವಿಧಾನಸಭೆ, ಪರಿಷತ್ ಸಿಬ್ಬಂದಿ, ಮುಖ್ಯಮಂತ್ರಿಗಳ ಕಚೇರಿ ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ನೌಕರರಿಗೆ ಮಾತ್ರ ದಿನ ಭತ್ಯೆ ಕೊಡುತ್ತಿದ್ದರು. ಈಗ ಸರ್ಕಾರದ ಆದೇಶದಿಂದಾಗಿ ಸಚಿವಾಲಯದ ಸುಮಾರು 3000 ಅಧಿಕಾರಿಗಳಿಗೆ ಭತ್ಯೆ ಸಿಗಲಿದೆ.

ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದಿಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ ಎಂದು ಉಪಾಧ್ಯಕ್ಷ ರಮೇಶ್ ಗಣೇಶ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *