ಬೆಂಗಳೂರು : ಮುಂದಿನ ವರ್ಷದಿಂದ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಬುಧವಾರ ನಡೆದ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೊಸ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ರು.
ವೃತ್ತಪರ ಕೋರ್ಸ್ ಗೆ ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಸಿಇಟಿ ಪರೀಕ್ಷೆ ನಡೆಸುತ್ತಿದೆ. ಸದ್ಯ 4 ವಿಷಯಗಳಿಗೆ ಎರಡು ದಿನ ಪರೀಕ್ಷೆಯನ್ನ ಕೆಇಎ ನಡೆಸುತ್ತಿದೆ. ಇದನ್ನ ಬದಲಾವಣೆ ಮಾಡಿ ನೀಟ್ ಮಾದರಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ. ನೀಟ್ ನಲ್ಲಿ ಒಂದೇ ದಿನ ಎರಡು ವಿಷಯಗಳ ಪರೀಕ್ಷೆ ನಡೆಯಲಿದೆ. ಈ ಮಾದರಿ ಸಿಇಟಿಗೆ ತರಲು ನಿರ್ಧಾರ ಮಾಡಿದ್ದು, ಮುಂದಿನ ವರ್ಷದಿಂದ ಜಾರಿಗೆ ಇಲಾಖೆ ತರಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರು ಎಂದಿನಂತೆ ಪರೀಕ್ಷೆಗಳು ಇರಲಿದೆ.
Some glimpses of my activities today –#DelegationMeet#VisitToChannarayapattana#KEAGoverningCouncilMeet pic.twitter.com/pCMuda0vN7
— Dr. C.N. Ashwath Narayan (@drashwathcn) January 29, 2020
ಇದೇ ವೇಳೆ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಪಡೆಯೋಕೆ ಆಸಕ್ತಿ ಇರೋ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದೆ. ದ್ವೀತಿಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೂ ಮೆಡಿಕಲ್ ಮತ್ತು ಡೆಂಟಲ್ ಸೀಟು ನೀಡಲು ಇಲಾಖೆ ನಿರ್ಧಾರ ಮಾಡಿದೆ. ಇಷ್ಟು ದಿನ ಎಂಜಿನಿಯರಿಂಗ್ ಸೀಟುಗಳಿಗೆ ಮಾತ್ರ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ನೀಡಲಾಗುತ್ತಿತ್ತು. ಈಗ ಇದನ್ನ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗೂ ವಿಸ್ತರಣೆ ಮಾಡಿದ್ದು, ಪೂರಕ ಪರೀಕ್ಷೆಯಲ್ಲಿ ಪಾಸ್ ಆಗಿ ನೀಟ್ ನಲ್ಲಿ ರ‌್ಯಾಂಕ್ ಪಡೆದವರಿಗೂ ಸೀಟ್ ಸಿಗಲಿದೆ ಅಂತ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ರು.

Leave a Reply