ಹೊಸ ವರ್ಷಕ್ಕೆ BMTC ವೋಲ್ವೋ ಬಸ್ ಪ್ರಯಾಣಿಕರಿಗೊಂದು ಸಿಹಿಸುದ್ದಿ

ಬೆಂಗಳೂರು: ಈ ಬಾರಿ ಹೊಸ ವರ್ಷಕ್ಕೆ ಬಿಎಂಟಿಸಿ ತನ್ನ ವೋಲ್ವೋ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ವೋಲ್ವೋ ಬಸ್ ಪ್ರಯಾಣ ದರವನ್ನ ಶೇ.37 ರಷ್ಟು ಇಳಿಕೆ ಮಾಡಿದೆ.

ಹೊಸ ವರ್ಷದ ಮೊದಲ ದಿನದಿಂದಲೇ ಹೊಸ ದರಗಳು ಜಾರಿಗೆ ಬರಲಿದೆ. ಪ್ರಾಯೋಗಿಕವಾಗಿ ಜನವರಿ ಒಂದು ತಿಂಗಳು ಏರ್‍ಪೋರ್ಟ್ ಮಾರ್ಗದ ವೋಲ್ವೋ ಬಸ್ ದರ ಇಳಿಕೆ ಮಾಡಲಾಗುತ್ತಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ ಮಾತ್ರ ದರ ಪರಿಷ್ಕರಣೆ ಯಥಾಸ್ಥಿತಿ ಮುಂದುವರಿಯಲಿದೆ.

ವಜ್ರ, ವಾಯುವಜ್ರ ಬಸ್ ಗಳ ಪ್ರಯಾಣ ದುಬಾರಿ ಆಗಿದ್ದರಿಂದ ಜನರು ವೋಲ್ವೋನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಾರೆ. ಪ್ರಯಾಣಿಕರನ್ನು ವೋಲ್ವೊ ಬಸ್‍ಗಳತ್ತ ಸೆಳೆಯಲು ಬಿಎಂಟಿಸಿ ಹೊಸ ಪ್ಲಾನ್ ಮಾಡಿಕೊಂಡಿದೆ. ಈ ಕೆಳಗಿನಂತೆ ದರದ ಬದಲಾವಣೆ ಆಗಲಿದೆ.

ಮಾರ್ಗ                                         ಪ್ರಸ್ತುತ ಮೂಲ ದರ ರೂ.                 ಪರಿಷ್ಕರಿಸಲಾದ ಮೂಲ ದರ ರೂ.

1. ಮೇಖ್ರಿ ಸರ್ಕಲ್ ಟು ಕೆಐಎಎಲ್          190 ರೂ.                                     175 ರೂ
2. ಹೆಬ್ಬಾಳ ಟು ಕೆಐಎಎಲ್                    170 ರೂ                                       150 ರೂ.
3. ಎಸ್ಟೀಂ ಮಾಲ್ ಟು ಕೆಐಎಎಲ್          170 ರೂ.                                      140 ರೂ.
4. ಕೋಗಿಲು ಕ್ರಾಸ್ ಟು ಕೆಐಎಎಲ್         170 ರೂ.                                      125 ರೂ.

Comments

Leave a Reply

Your email address will not be published. Required fields are marked *